2000 ಮುಸ್ಲಿಂ ಧರ್ಮಗುರುಗಳು ಸೇರಿದಂತೆ ವಿವಿಧ ಧಾರ್ಮಿಕ ಗುರುಗಳ ಜೊತೆ ಮೋದಿ ಯೋಗಾ ಡೇ |News Mirchi

2000 ಮುಸ್ಲಿಂ ಧರ್ಮಗುರುಗಳು ಸೇರಿದಂತೆ ವಿವಿಧ ಧಾರ್ಮಿಕ ಗುರುಗಳ ಜೊತೆ ಮೋದಿ ಯೋಗಾ ಡೇ

ಅಂತರಾಷ್ಟ್ರೀಯ ಯೋಗಾ ದಿನಾಚರಣೆಯ ಪ್ರಯುಕ್ತ ಜೂನ್ 21ರಂದು ಲಕ್ನೋದಲ್ಲಿನ ಅಂಬೇಡ್ಕರ್ ಮೈದಾನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ 2 ಸಾವಿರ ಮುಸ್ಲಿಂ ಧಾರ್ಮಿಕ ಗುರುಗಳು ಸೇರಿದಂತೆ ಎಲ್ಲಾ ಧರ್ಮದ ಧಾರ್ಮಿಕ ಗುರುಗಳ ಜೊತೆ ಪ್ರಧಾನಿ ನರೇಂದ್ರ ಮೋದಿ ಯೋಗಾಸನಗಳನ್ನು ಮಾಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಹಾ ಪಾಲ್ಗೊಳ್ಳಲಿದ್ದಾರೆ.

ಮುಸ್ಲಿಮರೊಂದಿಗೆ ಹಿಂದುಗಳು, ಕ್ರೈಸ್ತರು, ಸಿಖ್ಖರು ಪಾಲ್ಗೊಳ್ಳಲಿದ್ದಾರೆ. ಈ ಬಾರಿಯ ಯೋಗಾ ದಿನಾಚರಣೆಯಲ್ಲಿ ಯೋಗಾ ಮಾಡಲು ಭಾರೀ ಪ್ರಮಾಣದಲ್ಲಿ ಜನ ಸೇರಲಿದ್ದು, ಅದಕ್ಕೆ ತಕ್ಕಂತೆ ಸಿದ್ಧತೆ ನಡೆಯುತ್ತಿದೆ. ವಿವಿಧ ಧರ್ಮಗಳ ಜನರು ಒಂದೇ ಸ್ಥಳದಲ್ಲಿ ಯೋಗಾ ಮಾಡುವುದು ವಿಶ್ವ ದಾಖಲೆಯನ್ನಾಗಿ ಗುರುತಿಸಲು “ಗಿನ್ನಿಸ್ ಬುಕ್” ಪ್ರತಿನಿಧಿಗಳೂ ಲಕ್ನೋಗೆ ಆಗಮಿಸಲಿದ್ದಾರೆ.

  • No items.

Loading...
loading...
error: Content is protected !!