ನನ್ನ ಪತಿ ತೇಜ್ ಬಹದೂರ್ ನನ್ನು ಬಂಧಿಸಿದ್ದಾರೆ – News Mirchi

ನನ್ನ ಪತಿ ತೇಜ್ ಬಹದೂರ್ ನನ್ನು ಬಂಧಿಸಿದ್ದಾರೆ

ಯೋಧರಿಗೆ ಸರಬರಾಜಾಗುವ ಅಹಾರ ಪದಾರ್ಥಗಳನ್ನು ಕಾಳಸಂತೆಯಲ್ಲಿ ಮಾರಿಕೊಂಡು ನಮಗೆ ಕಳಪೆ ಅಹಾರ ನೀಡುತ್ತಿದ್ದಾರೆ ಎಂದು ಆರೋಪಿಸಿ ವಿಡಿಯೋ ಅಪ್ಲೋಡ್ ಮಾಡಿದ್ದ ಬಿಎಸ್ಎಫ್ ಯೋದ ತೇಜ್ ಬಹದೂರ್ ಯಾದವ್ ಅವರ ಪತ್ನಿ ಇದೀಗ ತನ್ನ ಪತಿಗೆ ಅಧಿಕಾರಿಗಳು ನಿರ್ಬಂಧ ವಿಧಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಕಳಪೆ ಆಹಾರ ನೀಡುತ್ತಿದ್ದಾರೆ ಎಂದು ವಿಡಿಯೋ ಅಪ್ಲೋಡ್ ಮಾಡಿದ ಕಾರಣಕ್ಕೆ ತನ್ನ ಪತಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು 29 ನೇ ಬೆಟಾಲಿಯನ್ ಯೋಧ ತೇಜ್ ಬಹಾದೂರ್ ಪತ್ನಿ ಆರೋಪಿಸಿದ್ದಾರೆ.

ತನ್ನ ಪತಿಗಾಗಿ ಎದುರು ನೊಡುತ್ತಿದ್ದೇನೆ. ಆದರೆ ಇದುವರೆಗೂ ಅವರು ಮನೆಗೆ ಬಂದಿಲ್ಲ ಎಂದು ಆತಂಕ ವ್ಯಕ್ತಪಡಿಸಿರುವ ಆಕೆ, ಹೇಗೋ ಬೇರೊಬ್ಬರ ಮೊಬೈಲಿನಿಂದ ಕರೆ ಮಾಡಿ ತನ್ನನ್ನು ಬಂಧಿಸಿದ್ದಾರೆ ಎಂದು ಪತಿ ಹೇಳಿದರು ಎಂದು ಆಕೆ ಹೇಳಿದ್ದಾರೆ. ಬಂಧಿಸಿದ ನಂತರ ತನ್ನ ಪತಿಯ ವಾಲೆಂಟರಿ ರಿಟೈರ್ಮೆಂಟ್ ರದ್ದು ಮಾಡಿದ್ದಾರೆ ಎಂದು ಆಕೆ ಹೇಳಿದ್ದಾರೆ.

ಯೋಧರಿಗೆ ಕಳಪೆ ಆಹಾರ ಮತ್ತು ಇತರೆ ಸಮಸ್ಯೆಗಳ ಕುರಿತಂತೆ ತನ್ನ ಪತಿ ಮಾಡಿದ ಆರೋಪದ ನಂತರ, ಜೀತ್ ಸಿಂಗ್ ಎಂಬ ಸಿಅರ್‌ಪಿಎಫ್ ಯೋಧ, ಲ್ಯಾನ್ಸ್ ನಾಯಕ್ ಯಜ್ಞಪ್ರತಾಪ್ ಸಿಂಗ್ ಸಮಸ್ಯೆಗಳ ಸಹ ಗೃಹಸಚಿವ ರಾಜನಾಥ್ ಸಿಂಗ್ ಅವರ ಗಮನಕ್ಕೆ ತಂದಿದ್ದರು. ಆದರೆ ಮೊದಲು ಆರೋಪ ಮಾಡಿದ ತನ್ನ ಪತಿಯನ್ನು ನಿವೃತ್ತರಾಗುವಂತೆ ಒತ್ತಡ ಮಾಡುತ್ತಿದ್ದಾರೆ ಎಂದ ಆಕೆ ಅವರಿಗೆ ಏನಾಗುತ್ತದೆಯೋ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಆದರೆ ತೇಜ್ ಬಹದೂರ್ ಯಾದವ್ ನನ್ನು ಬಂಧಿಸಿಲ್ಲ, ವಾಲೆಂಟರಿ ರಿಟೈರ್ಮೆಂಟ್ ರದ್ದುಗೊಳಿಸಿದ್ದೇವೆ ಎಂದು ಅಧಿಕಾರಿಗಳು ಪ್ರಕಟಿಸಿದ್ದಾರೆ. ಯೋಧನ ವಾಲೆಂಟರಿ ರಿಟೈರ್ಮೆಂಟ್ ಅನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

English Summary: The wife of Border Security Force (BSF) jawan Tej Bahadur Yadav, who recently posted a video on Facebook highlighting poor quality food being served to soldiers in his camp, on Thursday alleged that her husband has been arrested.

Contact for any Electrical Works across Bengaluru

Loading...

Leave a Reply

Your email address will not be published.

error: Content is protected !!