ಮಯನ್ಮಾರ್: ಜಲ ಹಬ್ಬದಲ್ಲಿ 285 ಸಾವು – News Mirchi

ಮಯನ್ಮಾರ್: ಜಲ ಹಬ್ಬದಲ್ಲಿ 285 ಸಾವು

ಮಯನ್ಮಾರ್ ನಲ್ಲಿ ಅಚರಿಸುವ ನೀರಿನ ಹಬ್ಬದಲ್ಲಿ ಒಟ್ಟು 285 ಜನ ಸಾವನ್ನಪ್ಪಿದ್ದು, ಸುಮಾರು 1,075 ಜನ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಮಯನ್ಮಾರ್ ನಲ್ಲಿ ಪ್ರತಿ ವರ್ಷ ನಡೆಯುವ ಸಾಂಪ್ರದಾಯಿಕ ತಿಂಗ್ಯಾನ್ ನೀರಿನ ಹಬ್ಬವನ್ನು ಗುರುವಾರದಿಂದ ಭಾನುವಾರದವರೆಗೆ ಆಚರಿಸಲಾಯಿತು. ಕಳೆದ ವರ್ಷ 272 ಜನ ಈ ಹಬ್ಬದ ವೇಳೆ ಸಾವನ್ನಪ್ಪಿದ್ದರು.

ನೀರಿನ ಹಬ್ಬ ಆಚರಣೆ ವೇಳೆ ಕೊಲೆ, ಸುಲಿಗೆ, ಕಾರು ಅಪಘಾತ ಮುಂತಾದ ಆರೋಪಗಳ ಮೇಲೆ ಸುಮಾರು 1,200 ಜನರ ವಿರುದ್ಧ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ.

Loading...