ಮೈಸೂರು: ಕಸದ ಫೋಟೋ ಕಳುಹಿಸಿ ಬಹುಮಾನ ಗೆಲ್ಲಿ – News Mirchi

ಮೈಸೂರು: ಕಸದ ಫೋಟೋ ಕಳುಹಿಸಿ ಬಹುಮಾನ ಗೆಲ್ಲಿ

ಮೈಸೂರು ನಗರದಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಪಾಲಿಕೆ ಹೊಸ ಯೋಜನೆ ತಂದಿದೆ. ನಗರದ ಸಾರ್ವಜನಿಕ ಪ್ರದೇಶಗಳಲ್ಲಿ ಕಸ ಕಂಡಲ್ಲಿ ಸಾರ್ವಜನಿಕರು ಅದರ ಫೋಟೋ ತೆಗೆದು ಕಳುಹಿಸುವಂತೆ ಪಾಲಿಕೆ ಕೋರಿದೆ.

ಮೈಸೂರು ಪಾಲಿಕೆ ಅಭಿವೃದ್ಧಿಪಡಿಸಿರುವ ಮೊಬೈಲ್ ಆಪ್ ಮೂಲಕ ತಮಗೆ ಕಂಡ ಕಸದ ಚಿತ್ರಗಳನ್ನು ಕಳುಹಿಸುವ ಮೂಲಕ ಬಹುಮಾನ ಪಡೆಯಬಹುದು ಎಂದು ಪಾಲಿಕೆ ಪ್ರಕಟಿಸಿದೆ. ಹೆಚ್ಚು ಚಿತ್ರ ಕಳುಹಿಸಿದವರು ಪಡೆಯಬಹುದು ರೂ. ಹತ್ತು ಸಾವಿರ ಬಹುಮಾನ. ಫೋಟೋ ಸ್ವೀಕರಿಸಿದ ಕೂಡಲೇ ಸ್ಥಳಕ್ಕೆ ಆಗಮಿಸುವ ಪಾಲಿಕೆ ಸಿಬ್ಬಂದಿ, ಕಸವನ್ನು ಸ್ವಚ್ಛಗೊಳಿಸಿ ನಂತರ ಆ ಫೋಟೋವನ್ನು ಪುನಃ ಕಳುಹಿಸಿದ ವ್ಯಕ್ತಿಗೆ ಕಳುಹಿಸುತ್ತಾರಂತೆ.

ಅಂತರ್ಜಾತಿ ವಿವಾಹ: 2.5 ಲಕ್ಷ ಪಡೆಯಲು ಇನ್ನು ವಾರ್ಷಿಕ ಆದಾಯದ ಮಿತಿಯಿಲ್ಲ

ಅಷ್ಟೇ ಅಲ್ಲದೆ ಶಾಲಾಕಾಲೇಜುಗಳಲ್ಲಿಯೂ ಸ್ವಚ್ಛತೆ ಕುರಿತು ರಸಪ್ರಶ್ನೆ ಕಾರ್ಯಕ್ರಮಗಳನ್ನು ಆಯೋಜಿಸಿ, ಗೆದ್ದವರಿಗೆ ಬಹುಮಾನ ನೀಡಲು ನಿರ್ಧರಿಸಲಾಗಿದೆ. ಸ್ವಚ್ಛತೆಗೆ ಸಂಬಂಧಿಸಿದಂತೆ ಪಾಲಿಕೆ ಕೈಗೊಳ್ಳುವ ಕ್ರಮಗಳ ಕುರಿತು ತಮ್ಮ ಅಭಿಪ್ರಾಯ ತಿಳಿಸಿಯೂ ಸಾರ್ವಜನಿಕರು ಬಹುಮಾನ ಪಡೆಯಬಹುದು.

Get Latest updates on WhatsApp. Send ‘Subscribe’ to 8550851559

Loading...