ಮುದಿ ಶಿಕ್ಷಕನ ಕಾಮಲೀಲೆ : ಪೊಲೀಸರಿಂದ ನೀತಿ ಪಾಠ – News Mirchi

ಮುದಿ ಶಿಕ್ಷಕನ ಕಾಮಲೀಲೆ : ಪೊಲೀಸರಿಂದ ನೀತಿ ಪಾಠ

ಮೈಸೂರು  :  ಶಿಕ್ಷಕರು ಅಂದರೆ ಭಯ ಭಕ್ತಿಯ ಜೊತೆಗೆ ಗೌರವ. ಅವರು ವಿದ್ಯಾರ್ಥಿಗಳಿಗೆ ನೀತಿ ಪಾಠ ಹೇಳಿ ಕೊಡುತ್ತಾರೆ. ಆದರೆ ಇಲ್ಲೊಬ್ಬ ಮುದಿ ಶಿಕ್ಷಕ ಕಾಮಲೀಲೆ ನಡೆಸುತ್ತಿದ್ದು ಇದೀಗ ಪೊಲೀಸರ ವಶದಲ್ಲಿದ್ದಾನೆ.

ಇಲ್ಲಿನ ಕೃಷ್ಣಮೂರ್ತಿ ಪುರಂ ಭಗಿನಿ ಸೇವಾ ಸಮಾಜ ಶಾಲೆಯ ಶಿಕ್ಷಕ ಶಿವಣ್ಣ ಎಂಬಾತನೇ ಇದೀಗ ಪೊಲೀಸರಿಂದ ನೀತಿ ಪಾಠ ಕೇಳುತ್ತಿದ್ದಾನೆ. ಮಕ್ಕಳಿಗೆ ಪಾಠ ಹೇಳಿಕೊಡಬೇಕಿದ್ದ  ಶಿಕ್ಷಕ  ಶಾಲೆಯ ತರಗತಿಯ ಕೊಠಡಿಯಲ್ಲೇ  ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ. ಪಾಠ ಹೇಳಿಕೊಡುವ ಶಿಕ್ಷಕನ ವಿಚಿತ್ರ ವರ್ತನೆಯಿಂದ ವಿದ್ಯಾರ್ಥಿಗಳು ಭಯಭೀತರಾಗಿದ್ದರು. ಅದರಲ್ಲೂ ಹೆಣ್ಣು ಮಕ್ಕಳ ಮೈ ಮುಟ್ಟಿ, ಅಂಗಾಂಗ ಸ್ಪರ್ಶಿಸಿ  ಮುದಿ ಶಿಕ್ಷಕ ಕಿರುಕುಳ ನೀಡುತ್ತಿದ್ದ.

ಅವನ ಕಿರುಕುಳಕ್ಕೆ ರೋಸಿದ ವಿದ್ಯಾರ್ಥಿಗಳು ಪಾಲಕರ ಬಳಿ ಹೇಳಿಕೊಂಡರು. ಪಾಲಕರು ತಡಮಾಡದೇ ಪೊಲೀಸರಿಗೆ ದೂರು ನೀಡಿದರು. ಲಕ್ಷ್ಮೀಪುರಂ ಠಾಣೆಯ  ಪೊಲೀಸರು ಶಾಲೆಗೆ ಆಗಮಿಸಿ ಶಿಕ್ಷಕನನ್ನು ವಶಕ್ಕೆ ಪಡೆದಿದ್ದಾರೆ. ಇದೀಗ ಚಪಲ ಚೆನ್ನಿಗರಾಯ ಕಂಬಿಯನ್ನು ಎಣಿಸತೊಡಗಿದ್ದಾನೆ.

Get Latest updates on WhatsApp. Send ‘Add Me’ to 8550851559

Loading...