ನಾಯಿ ಮಾಂಸ ನಿಷೇಧಕ್ಕೆ ವಿರೋಧ |News Mirchi

ನಾಯಿ ಮಾಂಸ ನಿಷೇಧಕ್ಕೆ ವಿರೋಧ

ಗೊಮಾಂಸ ನಿಷೇಧ ಕುರಿತ ವಿವಾದಗಳು ಇನ್ನು ಮುಂದುವರೆದಿವೆ. ಇದೀಗ ಹೊಸ ವಿವಾದ ಆರಂಭವಾಗಿದೆ. ಈಶಾನ್ಯ ರಾಜ್ಯಗಳಲ್ಲಿ ನಾಯಿ ಮಾಂಸ ನಿಷೇಧದ ವಿರುದ್ಧ ನಾಗಾಲ್ಯಾಂಡ್ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾಗಾಲ್ಯಾಂಡ್, ಮಿಜೋರಾಂ ಮುಂತಾದ ರಾಜ್ಯಗಳಲ್ಲಿ ಇರುವ ನಾಗಾ ಮತ್ತು ಇತರ ಬುಡಕಟ್ಟು ಜನರಲ್ಲಿ ನಾಯಿ ಮಾಂಸ ಸೇವನೆ ಹೆಚ್ಚು. ಈಶಾನ್ಯ ರಾಜ್ಯದ ಮುಖ್ಯಮಂತ್ರಿ ಜಿತೇಂದ್ರ ಸಿಂಗ್ ಗೆ ಕೆಲ ದಿನಗಳ ಹಿಂದೆ ಸಚಿವೆ ಮೇನಕಾ ಗಾಂಧಿ ಒಂದು ಪತ್ರ ಬರೆದಿದ್ದು, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಪ್ರಕಾರ ನಾಯಿ, ಬೆಕ್ಕು ಮತ್ತಿತರ ಪ್ರಾಣಿಗಳನ್ನು ಆಹಾರಕ್ಕಾಗಿ ಕೊಲ್ಲಬಾರದು ಎಂಬ ನಿಯಮವನ್ನು ಅದರಲ್ಲಿ ಉಲ್ಲೇಖಿಸಿದ್ದರು. ನಾಯಿ ಮಾಂಸ ಬಳಕೆ ಕಾನೂನು ವಿರೋಧಿ ಎಂದು ಹೇಳಿದ್ದರು.

ಆದರೆ ತಾವು ಏನು ತಿನ್ನಬೇಕೆಂದು ಹೇಳುವ ಅಧಿಕಾರ ಮೇನಕಾ ಗಾಂಧಿಯವರಿಗಿಲ್ಲ. ನಾಗಾಲ್ಯಾಂಡ್ ನಲ್ಲಿ ಈ ಕಾನೂನು ಜಾರಿಯಾಗುವುದಿಲ್ಲ ಎಂದು ನಾಗಾ ಪ್ರಜೆಗಳು ಹೇಳುತ್ತಿದ್ದಾರೆ. ನಾಗಾಲ್ಯಾಂಡ್ ಗೆ ಇರುವ ವಿಶೇಷ ಸ್ಥಾನಮಾನದ ಪ್ರಕಾರ ಇಲ್ಲಿನ ಅಚಾರ ವಿಚಾರಗಳನ್ನು ಕಾಪಾಡಿಕೊಳ್ಳಲು ಅವಕಾಶವಿದೆ, ಇದರ ಪ್ರಕಾರ ಆಹಾರ ಹವ್ಯಾಸ, ಧಾರ್ಮಿಕ ಅಚಾರಗಳ ವಿಷಯದಲ್ಲಿ ಭಾರತೀಯ ಕಾನೂನುಗಳನ್ನು ಇಲ್ಲಿ ಜಾರಿ ಮಾಡಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ. ಕೆಲ ತಲೆಮಾರುಗಳಿಂದ ತಾವು ನಾಯಿ ಮಾಂಸ ತಿನ್ನುತ್ತಿದ್ದು, ಅದು ಆರೋಗ್ಯಕ್ಕೂ ಒಳ್ಳೆಯದು, ಈಗ ಕೇವಲ ಒಬ್ಬ ವ್ಯಕ್ತಿ ಹೇಳಿದರೆಂದು ನಮ್ಮ ಹವ್ಯಾಸಗಳನ್ನು ಬದಲಿಸಲು ಸಾಧ್ಯವಿಲ್ಲ, ನಿಷೇಧ ವಿಧಿಸಿದರೆ ತೀವ್ರ ಹೋರಾಟ ನಡೆಸುವುದಾಗಿ ಹೋಹೋ ಸಂಘಟನೆಯ ಅಧ್ಯಕ್ಷ ಚುಬಾ ಒಜುಕುಮ್ ಎಚ್ಚರಿಸಿದ್ದಾರೆ.

ಆದರೆ ನಾಯಿಗಳನ್ನು ಕ್ರೂರವಾಗಿ ಕೊಲ್ಲುವ ವಿಷಯದ ಬಗ್ಗೆ ಪರಿಶೀಲಿಸುತ್ತಿದ್ದು, ಆಹಾರಕ್ಕಾಗಿ ನಾಯಿ ಮತ್ತಿತರ ಪ್ರಾಣಿಗಳನ್ನು ಕೊಲ್ಲುವಾಗ ಸರಿಯಾಗಿ ಶುಭ್ರಗೊಳಿಸಬೇಕು ಹಾಗೂ ಮತ್ತಿತರ ನಿಯಮಗಳನ್ನು ಪಾಲಿಸಬೇಕು ಎಂದು ಆರೋಗ್ಯ ಇಲಾಖೆಯ ಕಮೀಷನರ್ ಅಬಿಜಿತ್ ಸಿನ್ಹಾ ಹೇಳಿದ್ದಾರೆ. ಕೇವಲ ನಾಯಿ ಮಾಂಸದ ನಿಷೇಧ ವಿಧಿಸುವುದು ಕಷ್ಟ ಎಂದು ಹೆಚ್ಚುವರಿ ಕಾರ್ಯದರ್ಶಿ ಅರ್‌ಬಿ ತಾಂಗ್ ಹೇಳಿದ್ದಾರೆ. ನಾಗಾಲ್ಯಾಂಡ್ ನಲ್ಲಿ ನಾಯಿ ಮಾಂಸಕ್ಕೆ ಕೆಜಿಗೆ ರೂ. 300 ರಿಂದ 500 ರವರೆಗೆ ಬೆಲೆ ಇದೆ. ಇಲ್ಲಿ ಮಾಂಸಕ್ಕಾಗಿ ನಾಯಿಗಳನ್ನು ಸಾಕುವುದಿಲ್ಲ, ಹಾಗಾಗಿ ಅಸ್ಸಾಂ ಮುಂತಾದ ರಾಜ್ಯಗಳಿಂದ ನಾಯಿಗಳನ್ನು ಕಳ್ಳಸಾಗಣೆ ಮಾಡುತ್ತಾರೆ.

Loading...
loading...
error: Content is protected !!