ಧರ್ಮ, ಸಂಸ್ಕೃತಿ ವಿಚಾರದಲ್ಲಿ ಪ್ರಾಬಲ್ಯಕ್ಕೆ ಯತ್ನಿಸಿದಿದ್ದರೆ ಬಿಜೆಪಿಯೊಂದಿಗೆ ಮೈತ್ರಿ

ನಾಗಾಲ್ಯಾಂಡ್ ನಲ್ಲಿ ಧರ್ಮ ಮತ್ತು ಸಂಸ್ಕೃತಿಗಳ ವಿಷಯದಲ್ಲಿ ಪ್ರಾಬಲ್ಯ ಸಾಧಿಸಲು ಯತ್ನಿಸಿದೇ ಇರುವವರೆಗೂ ನಾವು ಬಿಜೆಪಿ ಜೊತೆಗೆ ಮೈತ್ರಿ ಮುಂದುವರೆಸಲು ನಾವು ಮುಕ್ತರಾಗಿದ್ದೇವೆ ಎಂದು ನಾಗಾಲ್ಯಾಂಡ್ ಮುಖ್ಯಮಂತ್ರಿ ಟಿ.ಆರ್.ಜೆಲಿಯಾಂಗ್ ಹೇಳಿದ್ದಾರೆ.

ಶೇ.90 ರಷ್ಟು ಕ್ರಿಶ್ಚಿಯನ್ ಜನಸಂಖ್ಯೆ ಹೊಂದಿರುವ ರಾಜ್ಯದಲ್ಲಿ ಬಿಜೆಪಿ ಬೆಳವಣಿಗೆ ಕುರಿತು ಆತಂಕ ವ್ಯಕ್ತಪಡಿಸಿದ್ದ ನಾಗಾಲ್ಯಾಂಡ್ ಬ್ಯಾಪ್ಟಿಸ್ಟ್ ಚರ್ಚ್ ಕೌನ್ಸಿಲ್, ಬಿಜೆಪಿ ರಾಜ್ಯದಲ್ಲಿ ಹಿಂದೂ ಮೌಲ್ಯಗಳನ್ನು ಹೇರುತ್ತಿದೆ ಎಂದು ನಾಗರಿಕರು ಮತ್ತು ರಾಜಕೀಯ ಪಕ್ಷಗಳಿಗೆ ಎಚ್ಚರಿಸಿದ್ದರು. ಈ ಹಿನ್ನೆಲೆಯಲ್ಲಿ ಜೆಲಿಯಾಂಗ್ ಹೇಳಿಕೆ ಮಹತ್ವ ಪಡೆದಿದೆ.

ಸಾಕ್ಷಿ ನಾಶಕ್ಕೆ ಯತ್ನ: ಪವರ್ ಮಿನಿಸ್ಟರ್ ಗೆ ಬಂಧನದ ಭೀತಿ

ಎನ್.ಪಿ.ಎಫ್ ನೇತೃತ್ವದ ಮೈತ್ರಿಕೂಟದಲ್ಲಿದ್ದ ಬಿಜೆಪಿ ಇದೀಗ ಫೆಬ್ರವರಿ 27 ರಂದು ನಡೆಯಲಿರುವ ವಿಧಾನಸಭೆ ಚುನಾವಣೆಗಳಿಗೆ ರಿಯೋ ನೇತೃತ್ವದ ನ್ಯಾಷನಲಿಷ್ಟ್ ಡೆಮಾಕ್ರಟಿಕ್ ಪ್ರೊಗ್ರೆಸೀವ್ ಪಾರ್ಟಿಯೊಂದಿಗೆ ಮೈತ್ರಿ ಮಾಡಿಕೊಂಡಿದೆ.

ರಿಯೋ ನೇತೃತ್ವದ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದ್ದರೂ, ಬಿಜೆಪಿಯ ಇಬ್ಬರು ಸಚಿವರು ಇನ್ನೂ ಸರ್ಕಾರದ ಭಾಗವಾಗಿಯೇ ಇರುವುದು, ಮುಂದಿನ ದಿನಗಳಲ್ಲಿ ಎನ್.ಪಿ.ಎಫ್ ವಿಷಯದಲ್ಲಿ ಬಿಜೆಪಿ ನಡೆ ಏನು ಎಂಬ ಕುತೂಹಲ ಮೂಡಿಸಿದೆ.

Get Latest updates on WhatsApp. Send ‘Subscribe’ to 8550851559