ನಾನು ಸಮಾಜ ಸೇವಕ, ನನಗೆ ನಿರೀಕ್ಷಣಾ ಜಾಮೀನು ನೀಡಿ ಎಂದ ಬಾಂಬ್ ನಾಗ

ಕೆಲ ದಿನಗಳಿಂದ ಪರಾರಿಯಲ್ಲಿರುವ ಮಾಜಿ ಕಾರ್ಪೊರೇಟರ್, ರೌಡಿ ನಾಗರಾಜ್ ಅಲಿಯಾಸ್ ಬಾಂಬ್ ನಾಗ ಬಂಧನದಿಂದ ತಪ್ಪಿಸಿಕೊಳ್ಳಲು ನಿರೀಕ್ಷಣಾ ಜಾಮೀನಿಗೆ ಮನವಿ ಮಾಡಿದ್ದಾನೆ ಎನ್ನಲಾಗಿದೆ. ನಾಗನ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ ವೇಳೆ ರದ್ದುಗೊಂಡ ಕೋಟ್ಯಾಂತರ ರೂಪಾಯಿ ಮೌಲ್ಯದ ಹಳೆಯ ನೋಟುಗಳನ್ನು ಪತ್ತೆಯಾಗಿದ್ದವು.

ನಿರೀಕ್ಷಣಾ ಜಾಮೀನು ಪಡೆಯಲು ಸ್ಥಳೀಯ ಕೋರ್ಟ್ ಮೊರೆ ಹೋಗಿರುವ ಬಾಂಬ್ ನಾಗ, ಮನೆಯಲ್ಲಿ ಸಿಕ್ಕ ರದ್ದಾದ ನೋಟುಗಳ ಬಗ್ಗೆ ತನಗೇನೂ ತಿಳಿಯದು, ಸಮಾಜ ಸೇವೆ ಮೂಲಕ ತನಗೆ ಸಮಾಜದಲ್ಲಿ ಉತ್ತಮ ಹೆಸರಿದೆ, ಅದನ್ನು ಪೊಲೀಸರು ಹಾಳು ಮಾಡುತ್ತಿದ್ದಾರೆ ಎಂದು ಕೋರ್ಟ್ ಗೆ ಹೇಳಿದ್ದಾನೆ.

ಹಣ ಪರಿವರ್ತನೆ ಕೇಸಲ್ಲಿ ಆರೋಪಿಯಾಗಿರುವ ವ್ಯಕ್ತಿ ನೀಡಿರುವ ದೂರಿನ ಆಧಾರದ ಮೇಲೆ ಪೊಲೀಸರು ನನ್ನ ಹೆಸರು ಕೆಡಿಸಲು ಪ್ರಯತ್ನಿಸುತ್ತಿದ್ದಾರೆ. ನಮ್ಮ ಮನೆಯಲ್ಲಿ ಅಷ್ಟೊಂದು ರದ್ದಾದ ನೋಟುಗಳು ಸಿಕ್ಕಿದ್ದಾದರೂ ಹೇಗೆಂಬುದು ನನಗೆ ತಿಳಿದಿಲ್ಲ.ಇದರ ಹಿಂದೆ ವ್ಯವಸ್ಥಿತ ಸಂಚು ಅಡಗಿದೆ ಎಂದು ಜಾಮೀನು ಅರ್ಜಿಯಲ್ಲಿ ತಿಳಿಸಿದ್ದಾನೆ.

Loading...
error: Content is protected !!