ಜೆ.ಎನ್.ಯು ವಿದ್ಯಾರ್ಥಿ ನಜೀಬ್ ನಾಪತ್ತೆ ಪ್ರಕರಣ: ವಿದ್ಯಾರ್ಥಿಗಳಿಗೆ ಸುಳ್ಳು ಪತ್ತೆ ಪರೀಕ್ಷೆಗೆ ಅನುಮತಿ ತೀರ್ಪು ಕಾಯ್ದಿರಿಸಿದ ಕೋರ್ಟ್

ನವದೆಹಲಿ: ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ ವಿದ್ಯಾರ್ಥಿ ನಜೀಬ್ ಅಹಮದ್ ನಾಪತ್ತೆ ಪ್ರಕರಣದಲ್ಲಿ  ಕೈವಾಡವಿದೆ ಎಂದು ಶಂಕಿಸಲಾದ 9 ವಿದ್ಯಾರ್ಥಿಗಳನ್ನು ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಿಸಲು ಸಿಬಿಐ ಸಲ್ಲಿಸಿದ್ದ ಮನವಿ ಕುರಿತ ತೀರ್ಪನ್ನು ಪಟಿಯಾಲಾ ಕೋರ್ಟ್ ಕಾಯ್ದಿರಿಸಿದೆ.

ಮಂಗಳವಾರ ದೆಹಲಿ ಹೈಕೋರ್ಟ್ ಗೆ ಸಿಬಿಐ ತನ್ನ ತನಿಖಾ ವರದಿಯನ್ನು ಸಲ್ಲಿಸಿತ್ತು. ಅಕ್ಟೋಬರ್ 15, 2016 ರಂದು ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಆಟೋ ಹತ್ತಿರುವುದು ಗಮನಕ್ಕೆ ಬಂದಿತ್ತು. ಇದಕ್ಕೂ ಮುನ್ನ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವಿದ್ಯಾರ್ಥಿಗಳ ಜೊತೆ ನಜೀಬ್ ಗೆ ಜಗಳವಾಗಿತ್ತು ಎನ್ನಲಾಗಿದೆ. ಅಂದಿನಿಂದ ಹಾಸ್ಟೆಲಿನಿಂದ ವಿದ್ಯಾರ್ಥಿ ನಜೀಬ್ ಅಹಮ್ ನಾಪತ್ತೆಯಾಗಿದ್ದಾನೆ. ಒಂದು ವರ್ಷವಾದರೂ ಇನ್ನೂ ನಜೀಬ್ ಸುಳಿವು ದೊರೆತಿಲ್ಲ.

 

 

Get Latest updates on WhatsApp. Send ‘Add Me’ to 8550851559