ನಾರದಾ ಹಗರಣ: ಸುಪ್ರೀಂ ನಲ್ಲಿ ಮಮತಾಗೆ ಹಿನ್ನೆಡೆ – News Mirchi
We are updating the website...

ನಾರದಾ ಹಗರಣ: ಸುಪ್ರೀಂ ನಲ್ಲಿ ಮಮತಾಗೆ ಹಿನ್ನೆಡೆ

ನವದೆಹಲಿ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರಿಗೆ ಸುಪ್ರೀಂ ಕೋರ್ಟ್ ನಲ್ಲಿ ಹಿನ್ನಡೆಯಾಗಿದೆ. ನಾರದಾ ಹಗರಣದಲ್ಲಿ ವಿಚಾರಣೆಗೆ ತಡೆ ನೀಡಬೇಕೆಂದು ತೃಣಮೂಲ ಕಾಂಗ್ರೆಸ್ ಮಾಡಿದ್ದ ಮನವಿಯನ್ನು ಸುಪ್ರೀಂ ತಿರಸ್ಕರಿಸಿದೆ. ನಾರದಾ ಹಗರಣದಲ್ಲಿ ಹಲವು ಸಚಿವರು ಮತ್ತು ಸಂಸದರ ಮೇಲೆ ಕೇಳಿ ಬಂದ ಆರೋಪಗಳ ಕುರಿತು ತನಿಖೆ ನಡೆಸಬೇಕೆಂದು ಕೋಲ್ಕತಾ ಹೈಕೋರ್ಟ್ ಇತ್ತೀಚೆಗೆ ಸಿಬಿಐಗೆ ಆದೇಶಿಸಿತ್ತು.

ಕೋಲ್ಕತಾ ಆದೇಶ ಎತ್ತಿ ಹಿಡಿದ ಸುಪ್ರೀಂ ಕೋರ್ಟ್, ಪ್ರಾಥಮಿಕ ತನಿಖೆ ನಡೆಸಲು ನೀಡಲಾಗಿದ್ದ 72 ಗಂಟೆಗಳ ಗಡುವನ್ನು ಮಾತ್ರ ಒಂದು ತಿಂಗಳಿಗೆ ವಿಸ್ತರಿಸಿದೆ. ಹೈಕೋರ್ಟ್ ತೀರ್ಪನ್ನು ಪಶ್ಚಿಮ ಬಂಗಾಳ ಸರ್ಕಾರ ಪ್ರಶ್ನಿಸಿರುವುದು ದುರದೃಷ್ಟಕರ ಎಂದು ಸುಪ್ರೀಂ ಹೇಳಿದೆ. ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡದಿಂದ ತನಿಖೆ ನಡೆಸಬೇಕು ಎಂಬ ತೃಣಮೂಲ ಕಾಂಗ್ರೆಸ್ ಮನವಿಯನ್ನೂ ಕೋರ್ಟ್ ತಿರಸ್ಕರಿಸಿದೆ.

2016 ವಿಧಾನಸಭೆಗೆ ಕೆಲ ದಿನಗಳ ಮುಂಚೆ ನಾರದಾ ಹಗರಣ ಬಯಲಿಗೆ ಬಂದಿತ್ತು. ನಾರದಾ ನ್ಯೂಸ್ ಎನ್ನುವ ಸಂಶೋಧನಾತ್ಮಕ ವೆಬ್ಸೈಟ್ ಸ್ಟಿಂಗ್ ಆಪರೇಷನ್ ಮೂಲಕ ಚುನಾವಣೆಗೆ ಮುನ್ನ ಕೆಲವು ನಾಯಕರು ಲಂಚ ಸ್ವೀಕರಿಸುತ್ತಿರುವ ದೃಶ್ಯಗಳನ್ನು ಚಿತ್ರೀಕರಿಸಿ ಮಾಧ್ಯಮಗಳಲ್ಲಿ ಪ್ರಸಾರ ಮಾಡಿತ್ತು.

Contact for any Electrical Works across Bengaluru

Loading...

Leave a Reply

Your email address will not be published.

error: Content is protected !!