ವರ್ಗಾವಣೆ ವಿಷಯದಲ್ಲಿ ತಲೆ ಹಾಕಬೇಡಿ: ಯು.ಪಿ ಸಂಸದರಿಗೆ ಮೋದಿ ಸೂಚನೆ – News Mirchi

ವರ್ಗಾವಣೆ ವಿಷಯದಲ್ಲಿ ತಲೆ ಹಾಕಬೇಡಿ: ಯು.ಪಿ ಸಂಸದರಿಗೆ ಮೋದಿ ಸೂಚನೆ

ಉತ್ತರ ಪ್ರದೇಶದಲ್ಲಿ ವರ್ಗಾವಣೆ, ಮುಂತಾದ ವಿಷಯಗಳಿಗೆ ಸಂಬಂಧಿಸಿದಂತೆ ಸಂಸದರು ಅಧಿಕಾರಿಗಳ ಮೇಲೆ ಯಾವುದೇ ಒತ್ತಡವನ್ನು ಹೇರಬಾರದು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅಲ್ಲಿನ ಸಂಸದರಿಗೆ ಸೂಚಿಸಿದ್ದಾರೆ.

ಅಧಿಕಾರಿಗಳನ್ನು ಅವರ ಕೆಲಸ ಮಾಡಲು ಬಿಡಿ. ಒಂದು ವೇಳೆ ಅಧಿಕಾರಿಗಳು ತಪ್ಪು ಮಾಡಿದರೆ ಅದನ್ನು ರಾಜ್ಯ ಸರ್ಕಾರ ನೋಡಿಕೊಳ್ಳುತ್ತದೆ ಎಂದು ಹೇಳಿದ್ದಾರೆ. ಉತ್ತರಪ್ರದೇಶದಲ್ಲಿ ಉತ್ತಮ ಆಡಳಿತಕ್ಕೆ ಒತ್ತು ನೀಡಲು ಇಬ್ಬರೂ ನಾಯಕರು ಈ ಸೂಚನೆ ನೀಡಿದ್ದಾರೆ. 2014 ರಲ್ಲಿ ಇಲ್ಲಿಂದ 71 ಲೋಕಸಭಾ ಸ್ಥಾನಗಳನ್ನು ಗೆದ್ದಿರುವ ಬಿಜೆಪಿ, ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲೂ ಪ್ರತಿಪಕ್ಷಗಳನ್ನು ಧೂಳೀಪಟ ಮಾಡಿ ಐತಿಹಾಸಿಕ ಗೆಲುವು ದಾಖಲಿಸಿ ರಾಜ್ಯದಲ್ಲಿ ಸರ್ಕಾರ ರಚಿಸಿತ್ತು.

Loading...

Leave a Reply

Your email address will not be published.