ವಿದೇಶ ಪ್ರವಾಸ ಮುಗಿಸಿ ವಾಪಸಾದ ಪ್ರಧಾನಿ

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಮೂರು ದಿನಗಳ ವಿದೇಶಿ ಪ್ರವಾಸ ಮುಗಿಸಿ ಬುಧವಾರ ಬೆಳಗ್ಗೆ ಭಾರತಕ್ಕೆ ವಾಪಸಾದರು. ದೆಹಲಿ ವಿಮಾನ ನಿಲ್ದಾಣದಲ್ಲಿ ಅವರನ್ನು ವಿದೇಶಾಂಗ ಸಚಿವ ಸುಷ್ಮಾ ಸ್ವರಾಜ್ ಸ್ವಾಗತಿಸಿದರು. ವಿದೇಶ ಪ್ರವಾಸವನ್ನು ಯಶಸ್ವಿಯಾಗಿದ್ದಕ್ಕೆ ಸುಷ್ಮಾ ಹರ್ಷ ವ್ಯಕ್ತಪಡಿಸಿದರು.

ಮೂರು ದೇಶಗಳ ಪ್ರವಾಸದ ಭಾಗವಾಗಿ ಪ್ರಧಾನಿ ಇದೇ ತಿಂಗಳು 24 ರಂದು ಪೋರ್ಚುಗಲ್ ಗೆ ಭೇಟಿ ನೀಡಿದ್ದರು. ಅಲ್ಲಿಂದ ಅಮೆರಿಕಕ್ಕೆ ಹೊರಟು, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾದರು. ನಂತರ ಕೊನೆಯದಾಗಿ ನೆದರ್ ಲ್ಯಾಂಡ್ ಗೆ ಭೇಟಿ ನೀಡಿದರು. ನಿನ್ನೆ ಹೇಗ್ ನಲ್ಲಿ ಕೆಲ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಪ್ರಧಾನಿಗಳು, ಇಂದು ಬೆಳಗ್ಗೆ ವಿಶೇಷ ವಿಮಾನದಲ್ಲಿ ಭಾರತಕ್ಕೆ ವಾಪಸಾದರು.