ಸಮಾವೇಶಕ್ಕೆ ತಮ್ಮ ಊಟ ತಾವೇ ತಂದ ಮೋದಿ

ಸಾಮಾನ್ಯವಾಗಿ ವಿಐಪಿಗಳು ಎಲ್ಲಿಗಾದರೂ ಬರುತ್ತಿದ್ದಾರೆಂದರೆ, ಅವರಿಗಿಷ್ಟವಾದ ತಿಂಡಿಗಳನ್ನು ಮೊದಲೇ ತಿಳಿದುಕೊಂಡು ಅದಕ್ಕಾಗೀ ಭಾರೀ ಸಿದ್ಧತೆ ನಡೆಸುತ್ತಾರೆ. ವಿಐಪಿಗಳ ಬಿಲ್ಲಿನ ಹೆಸರಿನಲ್ಲಿ ಜನರ ಹಣ ಪೋಲು ಮಾಡುತ್ತಾರೆ. ಆದರೆ ಇದಕ್ಕೆ ವಿಭಿನ್ನವಾಗಿ ತಮ್ಮ ಸ್ವಂತ ಕ್ಷೇತ್ರ ವಾರಣಾಸಿಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡ ಪ್ರಧಾನಿ ನರೇಂದ್ರ ಮೋದಿ, ತಮ್ಮ ಮನೆಯಿಂದ ಲಂಚ್ ಬಾಕ್ಸ್ ತಂದು ಊಟ ಸವಿದರು.

ವಾರಣಾಸಿಯಲ್ಲಿ ದೊಡ್ಡ ಮೈದಾನದಲ್ಲಿ ಸಾವಿರಾರು ಜನ ಸೇರಿದ್ದ ಸಮಾವೇಶದಲ್ಲಿ ಬಿಜೆಪಿ ಕಾರ್ಯಕರ್ತರನ್ನುದ್ದೇಶಿಸಿ ಮೋದಿ ಮಾತನಾಡಿದರು. ಆ ಸಮಾವೇಶದಲ್ಲಿ ಊಟದ ಸಿದ್ದತೆಗಳಿಲ್ಲ, ಹಾಗಾಗಿ ಅವರವರ ಊಟ ಅವರೇ ತರಬೇಕೆಂದು ಸಮಾವೇಶಕ್ಕೂ ಮೊದಲೇ ಆಯೋಜಕರು ತಿಳಿಸಿದ್ದರು.

ತಾವೂ ಕೂಡಾ ಸಾಮಾನ್ಯ ಕಾರ್ಯಕರ್ತ, ಹಾಗಾಗಿ ತನ್ನ ಊಟ ಮನೆಯಿಂದಲೇ ತಂದಿದ್ದೇನೆ ಎಂದು ಮೋದಿ ಹೇಳಿದರಂತೆ. ಹಲವರು ಮೋದಿಗಾಗಿ ಊಟ ತಂದಿದ್ದರೂ ತಾವು ತಂದಿದ್ದ ಆಹಾರವನ್ನೇ ಅವರು ಸೇವಿಸಿದರಂತೆ.

Related News

Loading...

Leave a Reply

Your email address will not be published.

error: Content is protected !!