ಟ್ರಂಪ್ ನಂತರ ಮೋದಿಯೇ ಎಂದ ಟ್ವಿಟರ್

3.75 ಕೋಟಿ ಫಾಲೋವರ್ ಗಳೊಂದಿಗೆ ಭಾರತದಲ್ಲಿಯೇ ಟ್ವಿಟರ್ ನಲ್ಲಿ ಅತ್ಯಧಿಕ ಹಿಂಬಾಲಕರನ್ನು ಹೊಂದಿರುವ ವ್ಯಕ್ತಿಯಾಗಿ ಪ್ರಧಾನಿ ಮೋದಿಯವರು ನಿಂತಿದ್ದಾರೆ. ಇನ್ನು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಿಂಬಾಲಕರ ಸಂಖ್ಯೆ 4.4 ಕೋಟಿಗೇರಿದೆ. 2017 ರಲ್ಲಿ ಟ್ರಂಪ್ ಮತ್ತು ಮೋದಿ ಮೋಸ್ಟ್ ಟ್ವೀಟೆಡ್ ವರ್ಲ್ಡ್ ಲೀಡರ್ಸ್ ಆಗಿ ಮೊದಲೆರಡು ಸ್ಥಾನಗಳಲ್ಲಿದ್ದಾರೆ ಎಂದು ಟ್ವಿಟರ್ ಪ್ರಕಟಿಸಿದೆ. ಅಮೆರಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಂತರ ಅತಿ ಹೆಚ್ಚು ಟ್ವೀಟ್ ಆಗಿರುವುದು ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಕುರಿತು.

ಟ್ವಿಟರ್ ಟಾಪ್ 10 ವಿಶ್ವ ನಾಯಕರಲ್ಲಿ ಡೊನಾಲ್ಡ್ ಟ್ರಂಪ್ ಮತ್ತು ಮೋದಿಯವರ ನಂತರ ವೆನಿಜುವೆಲಾ ದ ನಿಕೊಲಸ್ ಮದುರೋ, ಟರ್ಕಿಯ ಎರ್ಡೋಗನ್, ಬ್ರಿಟನ್ ನ ಥೆರೆಸಾ ಮೇ ಮುಂತಾದ ನಾಯಕರಿದ್ದಾರೆ.

2017 ರಲ್ಲಿ ಅತಿ ಹೆಚ್ಚು ಇಷ್ಟಪಟ್ಟ ಮೂರು ಟ್ವೀಟ್ ಗಳಲ್ಲಿ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ ಅವರ ಎರಡು ಪೋಸ್ಟ್ ಗಳು ಇವೆ. ವ್ಯಕ್ತಿಯೊಬ್ಬನ ಬಣ್ಣ, ಹಿನ್ನೆಲೆ, ಧರ್ಮದ ಆಧಾರದ ಮೇಲೆ ಮತ್ತೊಬ್ಬ ವ್ಯಕ್ತಿಯನ್ನು ದ್ವೇಷಿಸಬಾರದು ಎಂದು ಬರಾಕ್ ಒಬಾಮಾ ಮಾಡಿದ್ದ ಟ್ವೀಟ್ 2017 ರಲ್ಲಿ ಅತಿ ಹೆಚ್ಚು ಬಾರಿ ರೀಟ್ವೀಟ್ ಆದ ಹಿರಿಮೆಗೆ ಪಾತ್ರವಾಗಿದೆ.

Get Latest updates on WhatsApp. Send ‘Subscribe’ to 8550851559