ಕಾಂಗ್ರೆಸ್ಸಿಗರು ಮಾಡಲಾಗದ್ದನ್ನು ನಾವು ಮಾಡಿದರೇಕೆ ಅವರಿಗೆ ನೋವು – News Mirchi

ಕಾಂಗ್ರೆಸ್ಸಿಗರು ಮಾಡಲಾಗದ್ದನ್ನು ನಾವು ಮಾಡಿದರೇಕೆ ಅವರಿಗೆ ನೋವು

1.1 ಲಕ್ಷ ಕೋಟಿ ವೆಚ್ಚದ ಬುಲೆಟ್ ರೈಲು ಯೋಜನೆಯನ್ನು ವಿರೋಧಿಸುತ್ತಿರುವ ಕಾಂಗ್ರೆಸ್ ವಿರುದ್ಧ ಹರಿ ಹಾಯ್ದಿರುವ ಪ್ರಧಾನಿ ನರೇಂದ್ರ ಮೋದಿ, ಬುಲೆಟ್ ರೈಲು ವಿರೋಧಿಗಳು ಎತ್ತಿನ ಬಂಡಿಯಲ್ಲಿ ಪ್ರಯಾಣಿಸಲಿ ಎಂದು ವ್ಯಂಗ್ಯವಾಡಿದರು. ಅಹಮಾದ್ ಮತ್ತು ಮುಂಬೈ ಅನ್ನು ಸಂಪರ್ಕಿಸುವ ಬುಲೆಟ್ ರೈಲನ್ನು ಜಪಾನ್ ನಿರ್ಮಿಸಲಿದೆ. ಕಾಂಗ್ರೆಸ್ ಸರ್ಕಾರವೂ ಈ ಹಿಂದೆ ಈ ಬುಲೆಟ್ ಟ್ರೈನ್ ಯೋಜನೆಯನ್ನು ತರಲು ಬಯಸಿತ್ತು, ಆದರೆ ಅದನ್ನು ಸಾಧಿಸಲು ವಿಫಲವಾಯಿತು. ಹೀಗಾಗಿಯೇ ಅವರು ಈಗ ಬುಲೆಟ್ ರೈಲಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದರು.

ಬುಲೆಟ್ ರೈಲನ್ನು ಯಾರು ವಿರೋಧಿಸುತ್ತಾರೆ ಅವರು ಎತ್ತಿನ ಬಂಡಿಯಲ್ಲಿ ಪ್ರಯಾಣಿಸಲು, ನಾವು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಗುಜರಾತ್ ನಲ್ಲಿ ನಡೆಸುತ್ತಿರುವ ಚುನಾವಣಾ ರ್ಯಾಲಿಯಲ್ಲಿ ಹೇಳಿದರು.

ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವಿದ್ದಾಗಲೂ ಈ ಯೋಜನೆಯನ್ನು ತರಲು ಬಯಸಿದ್ದರು, ಆದರೆ ಅವರು ವಿಫಲವಾದರು. ನಮ್ಮ ಸರ್ಕಾರ ಈ ಯೋಜನೆಯನ್ನು ಕಡಿಮೆ ವೆಚ್ಚದಲ್ಲಿ ಕೈಗೆತ್ತಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಹೀಗಾಗಿಯೇ ಅವರ ವಿರೋಧಿಸುತ್ತಿದ್ದಾರೆ. ನನಗೆ ಬೇಸರವೆಂದರೆ, ಕಾಂಗ್ರೆಸ್ ನವರು ಮಾಡಲಾಗದ್ದನ್ನು ಇತರರು ಮಾಡಿದರೆ ಅವರಿಗೇಕೆ ನೋವುಂಟು ಮಾಡುತ್ತದೆ ಎಂದು ಪ್ರಶ್ನಿಸಿದರು.

ಮುಂಬೈ-ಅಹಮದಾಬಾದ್ ಹೈ ಸ್ಪೀಡ್ ರೈಲು ಯೋಜನೆ ಮಹತ್ವವನ್ನು ಪ್ರಧಾನಿ ಈ ಸಂದರ್ಭದಲ್ಲಿ ವಿವರಿಸಿದರು. ಗುಜರಾತ್ ನಲ್ಲಿ ಇದು ಉದ್ಯೋಗಾವಕಾಶ ಸೃಷ್ಟಿಸುತ್ತದೆ. ಈ ಯೋಜನೆ ಸಿಮೆಂಟ್, ಉಕ್ಕು, ಕಾರ್ಮಿಕರು ಎಲ್ಲಿಂದ ಬರುತ್ತಾರೆ? ಭಾರತದಿಂದಲ್ಲವೇ. ಮತ್ತೆ ಅದನ್ನೆಲ್ಲಾ ಯಾರು ಖರೀದಿಸುತ್ತಿದ್ದಾರೆ, ಜಪಾನ್ ಅಲ್ಲವೇ ಎಂದು ಪ್ರಶ್ನಿಸಿದರು.

Get Latest updates on WhatsApp. Send ‘Add Me’ to 8550851559

Loading...