ಜನ ಸಾಮಾನ್ಯರೆಂದರೆ ಮೋದಿಗೆ ಲೆಕ್ಕಕ್ಕಿಲ್ಲ : ರಾಹುಲ್

ನವದೆಹಲಿ: ರೂ. 500, ರೂ. 1000 ಮುಖಬೆಲೆಯ ನೋಟು ರದ್ದುಗೊಳಿಸಿರುವುದರಿಂದ ಜನಸಾಮಾನ್ಯರು ಹಲವು ಕಷ್ಟ ಅನುಭವಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಬೇಸರ ವ್ಯಕ್ಯಪಡಿಸಿದ್ದಾರೆ. ಜನ ಸಾಮಾನ್ಯರೆಂದರೆ ಮೋದಿಗೆ ಲೆಕ್ಕಕ್ಕಿಲ್ಲ ಎಂದು ಅವರು ಆರೋಪಿಸಿದರು.

ದೊಡ್ಡ ಕರೆನ್ಸಿ ನೋಟು ರದ್ದುಗೊಳಿಸಿದ ಕೇಂದ್ರದ ತೀರ್ಮಾನದ ಕುರಿತು ಬುಧವಾರ ಮಾಧ್ಯಮಗಳೊಂದಿಗೆ ರಾಹುಲ್ ಮಾತನಾಡಿದರು. ಕೇಂದ್ರ ಸರ್ಕಾರ ದಿಡೀರ್ ನಿರ್ಧಾರ ಕೈಗೊಂಡಿದ್ದರಿಂದ ರೈತರು, ಸಣ್ಣ ವ್ಯಾಪಾರಿಗಳು, ಗೃಹಿಣಿಯರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ರಾಹುಲ್ ಹೇಳಿದರು.

ಅಸಲಿ ದರೋಡೆಕೋರರು ತಪ್ಪಿಸಿಕೊಳ್ಳುತ್ತಿದ್ದಾರೆ. ವಿದೇಶಗಳು ಸೇರಿದಂತೆ ರಿಯಲ್ ಎಸ್ಟೇಟ್‌ಗಳಲ್ಲಿ ಅಡಿಗಿಸಿಟ್ಟಿರುವ ಕಪ್ಪು ಹಣವನ್ನು ಕೇಂದ್ರ ಬಿಟ್ಟುಬಿಡುತ್ತಿದೆ ಎಂದು ಆರೋಪಿಸಿದರು.