ಒಳ್ಳೆಯ ಕೆಟ್ಟ ಭಯೋತ್ಪಾದಕರೆಂದು ವಿಂಗಡಿಸುವವರು ಭಯೋತ್ಪಾದಕರಷ್ಟೇ ಅಪಾಯಕಾರಿ

ಭಯೋತ್ಪಾದನೆ ಮತ್ತು ಹವಾಮಾನ ಬದಲಾವಣೆಗಳು ಇಂದು ವಿಶ್ವ ಎದುರಿಸುತ್ತಿರುವ ಬಹುದೊಡ್ಡ ಬೆದರಿಕೆ ಎಂದು ಹೇಳಿದ ಪ್ರಧಾನಿ ನರೇಂದ್ರ ಮೋದಿ, ಭಯೋತ್ಪಾದಕರಲ್ಲಿ ಒಳ್ಳೆಯ ಮತ್ತು ಕೆಟ್ಟ ಭಯೋತ್ಪಾದಕರೆಂದು ವಿಂಗಡಿಸುತ್ತಿರುವವರು ಭಯೋತ್ಪಾದಕರಷ್ಟೇ ಅಪಾಯಕಾರಿ ಎಂದು ಅಭಿಪ್ರಾಯಪಟ್ಟಿದ್ದಾರೆ.

ದಾವೋಸ್ ನ ಸ್ವಿಸ್ ಮೌಂಟೇನ್ ರೆಸಾರ್ಟ್ ನಲ್ಲಿ ನಡೆಯುತ್ತಿದ್ದ ವಿಶ್ವ ಆರ್ಥಿಕ ವೇದಿಕೆಯ ವಾರ್ಷಿಕ ಸಭೆಯ ಆರಂಭಿಕ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ ಮೋದಿ, ಭಯೋತ್ಪಾದನೆಯಿಂದಾಗುವ ಹಾನಿಯ ಕುರಿತು ಭಾರತವು ಚೆನ್ನಾಗಿ ತಿಳಿದಿದ್ದು, ಆ ಕುರಿತು ಹೆಚ್ಚು ವಿವರಿಸಲು ಬಯಸುವುದಿಲ್ಲ ಎಂದರು. ಇಂದು ಶಾಂತಿ, ಭದ್ರತೆ ಮತ್ತು ಸ್ಥಿರತೆಯ ಸಮಸ್ಯೆಗಳು ಇಂದು ಗಂಭೀರ ಜಾಗತಿಕ ಸವಾಲುಗಳಾಗಿ ಪರಣಮಿಸಿವೆ ಎಂದು ಅಭಿಪ್ರಾಯಪಟ್ಟರು.

ಸಾಮಾಜಿಕ ಮಾಧ್ಯಮದ ಕುರಿತು ಪ್ರಸ್ತಾಪಿಸಿದ ಪ್ರಧಾನಿ, ತಂತ್ರಜ್ಞಾನವನ್ನು ಮುರಿಯುವುದು, ಸೇರಿಸುವುದು ಮತ್ತು ತಿರುಚುವುದನ್ನು ನಾವು ಇಂದು ಸಾಮಾಜಿಕ ಮಾಧ್ಯಮದ ಮೂಲಕ ನೋಡುತ್ತಿದ್ದೇವೆ. ತಂತ್ರಜ್ಞಾನ ಚಾಲಿತ ಪರವರ್ತನೆಯು ಇಂದು ಜನರ ಚಿಂತನೆ, ಕೆಲಸ, ಅಂತರಾಷ್ಟ್ರೀಯ ಸಮುದಾಯ, ರಾಜಕೀಯ ಮತ್ತು ಆರ್ಥಿಕತೆಯ ಮೇಲೆ ಆಳವಾದ ಪ್ರಭಾವ ಬೀರಿದೆ ಎಂದು ಹೇಳಿದರು.

1997 ಮತ್ತು 2018 ರ ವಿಶ್ವ ಆರ್ಥಿಕ ವೇದಿಕೆ ವಾರ್ಷಿಕ ಸಭೆಗಳ ನಡುವೆ ಪ್ರಧಾನಿ ಹೋಲಿಕೆ ಮಾಡಿದರು. 1997 ರಲ್ಲಿ ದಾವೋಸ್ ಗೆ ಅಂದಿನ ಪ್ರಧಾನಿ ಮಂತ್ರಿ ದೇವೇಗೌಡ ಅವರು ಆಗಮಿಸಿದ್ದರು. ಆ ಸಮಯದಲ್ಲಿ ನಮ್ಮ ಜಿಡಿಪಿ ದರ 400 ಬಿಲಿಯನ್ ಡಾಲರ್ ಗಳಿಗಿಂತಲೂ ಸ್ವಲ್ಪ ಹೆಚ್ಚಿತ್ತು. ಈಗ ಅದು 6 ಪಟ್ಟು ಹೆಚ್ಚಾಗಿದೆ ಎಂದರು.

ಭಾರತವು ಸದಾ ಒಗ್ಗಟ್ಟಿನ ಮೌಲ್ಯಗಳು, ಮತ್ತು ಏಕತೆ ಅಥವಾ ವಸುದೈವ ಕುಟುಂಬಕಂ ಎಂಬ ಮಾತಿನಲ್ಲಿ ವಿಶ್ವಾಸ ಹೊಂದಿದೆ. ಇದರ ಅರ್ಥ ಇಡೀ ಪ್ರಪಂಚವು ಒಂದು ಕುಟುಂಬವಾಗಿದೆ. ಇದು ಅಂತರಗಳನ್ನು ಬೆಸೆಯುವ ಸೇತುವೆಯಾಗಿದೆ. ನಾವು ಸದಾ ಮಾನವೀಯತೆಯನ್ನು ಒಗ್ಗೂಡಿಸುವಲ್ಲಿ ನಂಬಿಕೆಯನ್ನು ಹೊಂದಿದ್ದೇವೆಯೇ ಹೊರತು ಮುರಿಯುವುದರಲ್ಲಿ ಅಲ್ಲ ಎಂದು ಹೇಳಿದರು.

ಅಭಿವೃದ್ಧಿ, ವಿಶ್ವದಲ್ಲಿ ಶಾಂತಿ ಮತ್ತು ಸ್ಥಿರತೆಗಳಿಗೆ ತಡೆಯೊಡ್ಡಲು ಕೆಲವು ಪ್ರಬಲ ಶಕ್ತಿಗಳಿವೆ. ಆದರೆ ನಾವೆಲ್ಲಾ ಒಂದಾಗಿ ನಿಂತರೆ ಆ ಶಕ್ತಿಗಳಿಂದ ಆದ ಹಾನಿಗಳನ್ನು ಸರಿಪಡಿಸಬಹುದು ಎಂದು ಕರೆ ನೀಡಿದರು.

ಭಾರತದ ಪ್ರಜಾಪ್ರಭುತ್ವ ಕೇವಲ ರಾಜಕೀಯ ವ್ಯವಸ್ಥೆಯಲ್ಲ

ಭಾರತದಲ್ಲಿ ಪ್ರಜಾಪ್ರಭುತ್ವ ಕೇವಲ ರಾಜಕೀಯ ವ್ಯವಸ್ಥೆಯಲ್ಲ, ಬದಲಿಗೆ ಅದು ಜೀವನದ ವಿಧಾನ. ಭಾರತದಲ್ಲಿನ ಪ್ರಜಾಪ್ರಭುತ್ವ ಮತ್ತು ವೈವಿಧ್ಯತೆಗಳಿಗೆ ನಾವು ಹೆಮ್ಮೆ ಪಡುತ್ತೇವೆ. ವೈವಿಧ್ಯಮಯ ಧರ್ಮ, ಸಂಸ್ಕೃತಿ, ಭಾಷೆ, ಉಡುಪು ಮತ್ತು ಆಹಾರ ವಿಧಾನಗಳ ಸಮಾಜಕ್ಕೆ ಪ್ರಜಾಪ್ರಭುತ್ವ ಕೇವಲ ರಾಜಕೀಯ ವ್ಯವಸ್ಥೆಯಾಗಿ ಉಳಿಯದೆ ಜೀವನ ವಿಧಾನವಾಗಿದೆ ಎಂದರು.

English Summary: Prime Minister Narendra Modi has said that terrorism and climate change are the biggest threat posed by the world today. Those who are classified terrorists as good and bad terrorists are as dangerous as terrorists.

Addressing the opening session of the annual meeting of the World Economic Forum on the Swiss Mountain Resort in Davos, Modi said India was well aware of the damage caused by terrorism and i don’t want to explain much about it. Today, peace, security and stability issues have proven to be serious global challenges today.

Get Latest updates on WhatsApp. Send ‘Subscribe’ to 8550851559