ಮೋದಿ ಅಮೆರಿಕಾ ಪ್ರವಾಸ: 26 ರಂದು ಮೋದಿ ಟ್ರಂಪ್ ಭೇಟಿ – News Mirchi

ಮೋದಿ ಅಮೆರಿಕಾ ಪ್ರವಾಸ: 26 ರಂದು ಮೋದಿ ಟ್ರಂಪ್ ಭೇಟಿ

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಅಮೆರಿಕಾ ಪ್ರವಾಸ ಖಚಿತವಾಗಿದೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಹ್ವಾನದ ಮೇರೆಗೆ ಮೋದಿ ಜೂನ್ 25 ಮತ್ತು 26 ರಂದು ಅಮೆರಿಕಾ ಪ್ರವಾಸ ಕೈಗೊಳ್ಳಿದ್ದಾರೆ.

ಜೂನ್ 25 ರಂದು ಅಮೆರಿಕಕ್ಕೆ ತೆರಳಲಿರುವ ನರೇಂದ್ರ ಮೋದಿ, 26 ರಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಬೇಟಿ ಮಾಡಲಿದ್ದಾರೆ. ಉಭಯ ದೇಶಗಳ ನಡುವೆ ರಕ್ಷಣಾ ಕ್ಷೇತ್ರದಲ್ಲಿ ಸಹಕಾರ, ವಾಣಿಜ್ಯ ಮುಂತಾದ ಕ್ಷೇತ್ರಗಳಲ್ಲಿ ಒಪ್ಪಂದಗಳನ್ನು ಮಾಡಿಕೊಳ್ಳುವ ಸಾಧ್ಯತೆ ಇದೆ.

ಟ್ರಂಪ್ ಅಮೆರಿಕಾ ಅಧ್ಯಕ್ಷರಾಗಿ ಅಧಿಕಾರಿ ವಹಿಸಿಕೊಂಡ ನಂತರ ಇದೇ ಮೊದಲ ಬಾರಿಗೆ ಭಾರತದ ಪ್ರಧಾನಿ ಮೋದಿ ಅಲ‍್ಲಿಗೆ ಭೇಟಿ ನೀಡುತ್ತಿರುವುದು. ಅಮೆರಿಕಾ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಟ್ರಂಪ್, ಭಾರತದ ಪ್ರಧಾನಿ ಮೋದಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ್ದರು. ಆ ಸಮಯದಲ್ಲಿಯೇ ಅಮೆರಿಕಕ್ಕೆ ಬರುವಂತೆ ಮೋದಿಯವರನ್ನು ಟ್ರಂಪ್ ಆಹ್ವಾನಿಸಿದ್ದರು. ಒಂದು ಕಡೆ ಹೆಚ್1ಬಿ1 ವೀಸಾ ನಿಯಮಗಳನ್ನು ಕಠಿಣಗೊಳಿಸಿರುವುದು ಮತ್ತು ಪ್ಯಾರಿಸ್ ಒಪ್ಪಂದದಿಂದ ಅಮೆರಿಕಾ ಹೊರಬಂದಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅಮೆರಿಕಾ ಪ್ರವಾಸ ಪ್ರಾಮುಖ್ಯತೆ ಪಡೆದಿದೆ.

Loading...