ಎರಡನೇ ಬಾರಿಗೆ ಮೋದಿ ಟೈಮ್ಸ್ ವರ್ಷದ ವ್ಯಕ್ತಿ |News Mirchi

ಎರಡನೇ ಬಾರಿಗೆ ಮೋದಿ ಟೈಮ್ಸ್ ವರ್ಷದ ವ್ಯಕ್ತಿ

ಟೈಮ್ಸ್ ಮ್ಯಾಗಜಿನ್ ಪ್ರತಿ ವರ್ಷ ನಡೆಸುವಂತೆ ಈ ಬಾರಿಯೂ ನಡೆಸಿದ ‘ವರ್ಷದ ವ್ಯಕ್ತಿ 2016’ ಆನ್ಲೈನ್ ಪೋಲಿಂಗ್ ನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ, ವಿಶ್ವದ ಘಟಾನುಘಟಿ ನಾಯಕರನ್ನು ಹಿಂದಿಕ್ಕಿ ಗೆಲುವು ಸಾಧಿಸಿದ್ದಾರೆ.

ಅಮೆರಿಕದ ಅಧ್ಯಕ್ಷೀಯ ಪಟ್ಟವೇರಲಿರುವ ಡೊನಾಲ್ಡ್ ಟ್ರಂಪ್, ನಿರ್ಗಮಿತ ಅಧ್ಯಕ್ಷ ಬರಾಕ್ ಒಬಾಮಾ, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ರವರನ್ನೂ ಮೋದಿ ಹಿಂದಿಕ್ಕಿರುವುದು ವಿಶೇಷ.

ಅನ್ಲೈನ್ ಮತದಾನ ನಿನ್ನೆ ರಾತ್ರಿ ಅಂತ್ಯಗೊಂಡಿದ್ದು, ಒಟ್ಟು ಮತಗಳಲ್ಲಿ ಶೇ. 18 ರಷ್ಟು ಮತಗಳನ್ನು ನರೇಂದ್ರ ಮೋದಿಯವರು ಗಳಿಸಿದ್ದಾರೆ.

ಇತರ ಜಗತ್ತಿನ ಪ್ರಮುಖ ವ್ಯಕ್ತಿಗಳಿಗಿಂತಲೂ ಮೋದಿ ತುಂಬಾ ಅಂತರ ಕಾಯ್ದುಕೊಂಡಿದ್ದಾರೆ. ಟ್ರಂಪ್, ಒಬಾಮಾ, ಜೂಲಿಯನ್ ಅಸಾಂಜೆಗೆ ಶೇ. 7 ರಷ್ಟು ಜನರು ‘ಎಸ್’ ಎಂದು ಓಟ್ ಮಾಡಿದ್ದಾರೆ. ಫೇಸ್ಬುಕಗ ಸಂಸ್ಥಾಪಕ ಮಾರ್ಕ್ ಜುಕರ್ ಬರ್ಗ್(ಶೇ.2), ಅಮೆರಿಕದ ಅಧ್ಯಕ್ಷೀಯ ಚುನಾವಣೆ ಅಭ್ಯರ್ಥಿ ಹಿಲರಿ ಕ್ಲಿಂಟನ್ ಅವರಿಗೆ ಶೇ. 4 ರಷ್ಟು ಓಟ್ ಮಾಡಿದ್ದಾರೆ.

ಟೈಮ್ಸ್ ಸಂಪಾದಕರು ಈ ವಾರ ವಿಜೇತರನ್ನು ಘೋಷಿಸಲಿದ್ದಾರೆ. ಆದರೆ ಆನ್ಲೈನ್ ಫಲಿತಾಂಶ ಈಗಾಗಲೇ ಮೋದಿಯವರು ಜಗತ್ತಿನಲ್ಲಿ ಎಷ್ಟು ಪ್ರಭಾವಿ ನಾಯಕರೆಂಬುದನ್ನು ಸಾರಿ ಹೇಳುತ್ತಿದೆ. ಮೋದಿಯವರಿಗೆ ಈ ಗೌರವ ಸಿಗುತ್ತಿರುವುದು ಇದು ಎರಡನೇ ಬಾರಿ. 2014 ರಲ್ಲಿ ನಡೆದ ಪೋಲಿಂಗ್ ನಲ್ಲಿ 5 ಮಿಲಿಯನ್ ಮತಗಳಲ್ಲಿ ಶೇ.16 ಮತ ಪಡೆದು‌ ವರ್ಷದ ವ್ಯಕ್ತಿಯಾಗಿ ಓದುಗರ ಅಯ್ಕೆಯಾಗಿದ್ದರು.

Loading...
loading...
error: Content is protected !!