ಚಿತ್ರ ಮಂದಿರಗಳಲ್ಲಿ ರಾಷ್ಟ್ರಗೀತೆ ಕಡ್ಡಾಯ: ಸುಪ್ರೀಂ

ನವದೆಹಲಿ: ಚಿತ್ರ ಮಂದಿರಗಳ ಮಾಲೀಕರಿಗೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶವನ್ನು ನೀಡಿದೆ. ದೇಶದಲ್ಲಿನ ಎಲ್ಲಾ ಚಿತ್ರ ಮಂದಿರಗಳಲ್ಲಿ, ಚಿತ್ರ ಅರಂಭಕ್ಕೂ ಮುನ್ನ ರಾಷ್ಟ್ರಗೀತೆಯನ್ನು ಪ್ರದರ್ಶಿಸಬೇಕು ಎಂದು ಸೂಚಿಸಿದೆ. ಈ ಕುರಿತು ಬುಧವಾರ ಆದೇಶ ನೀಡಿದೆ.

ರಾಷ್ಟ್ರಗೀತೆ, ದ್ವಜವನ್ನು ಪ್ರತಿಯೊಬ್ಬರೂ ಗೌರವಿಸಬೇಕು, ರಾಷ್ಟ್ರಗೀತೆ ಪ್ರದರ್ಶನದ ವೇಳೆ ಚಿತ್ರ ಮಂದಿರಗಳಲ್ಲಿ ಪ್ರತಿಯೊಬ್ಬರೂ ಎದ್ದು ನಿಂತು ಗೌರವ ಸೂಚಿಸಬೇಕು ಎಂದು ಹೇಳಿದೆ. ಈಗಾಗಲೇ ಕೆಲವೇ ಚಿತ್ರ ಮಂದಿರಗಳಲ್ಲಿ ರಾಷ್ಟ್ರಗೀತೆಯ ಪ್ರದರ್ಶನ ಮಾಡಲಾಗುತ್ತಿದೆ.