ಕಾರ್ ರೇಸರ್ ಅಶ್ವಿನ್ ದಂಪತಿಗಳು ಸಜೀವ ದಹನ – News Mirchi

ಕಾರ್ ರೇಸರ್ ಅಶ್ವಿನ್ ದಂಪತಿಗಳು ಸಜೀವ ದಹನ

ಚೆನ್ನೈನಲ್ಲಿ ನಡೆದ ಅಪಘಾತದಲ್ಲಿ ವೃತ್ತಿಪರ ಕಾರ್ ರೇಸರ್ ಅಶ್ವಿನ್ ಸುಂದರ್ ಮತ್ತು ಅವರ ಪತ್ನಿ ನಿವೇದಿತ ಸಜೀವ ದಹನವಾಗಿದ್ದಾರೆ. ಶನಿವಾರ ಸ್ನೇಹಿತರ ಮನೆಗೆ ತೆರಳಿ ಮನೆಗೆ ವಾಪಸಾಗುತ್ತಿದ್ದ ಸಮಯದಲ್ಲಿ ಅವರು ಪ್ರಯಾಣಿಸುತ್ತಿದ್ದ ಬಿಎಂಡಬ್ಲ್ಯೂ ಕಾರು ರಸ್ತೆ ಪಕ್ಕದ ಮರಕ್ಕೆ ಡಿಕ್ಕಿ ಹೊಡೆದು ಈ ಅಪಘಾತ ನಡೆದಿದೆ.

ಮರ ಮತ್ತು ಗೋಡೆಗೆ ಮಧ್ಯೆ ಕಾರು ಸಿಲುಕಿದ್ದರಿಂದ ಕಾರಿನ ಡೋರ್ ತೆರೆಯಲು ಸಾಧ್ಯವಾಗಿಲ್ಲ. ಹೀಗಾಗಿ ದಂಪತಿಗಳಿಬ್ಬರೂ ಕಾರಿನಲ್ಲಿ ಕಾಣಿಸಿಕೊಂಡ ಬೆಂಕಿಗೆ ಆಹುತಿಯಾಗಿದ್ದಾರೆ. ಬೆಂಕಿ ನೋಡಿದ ಸ್ಥಳೀಯರು ನಗರದ ಪೊಲೀಸ್ ಕಂಟ್ರೋಲ್ ರೂಮ್ ಗೆ ಮಾಹಿತಿ ನೀಡಿದ್ದರು. ಕೂಡಲೇ ಅಗ್ನಿಶಾಮಕ ಸಿಬ್ಬಂದಿ ಮತ್ತು ರಕ್ಷಣಾ ತಂಡಗಳು ಸ್ಥಳಕ್ಕಾಗಮಿಸಿದವು. ಆದರೆ ಆ ವೇಳೆಗಾಗಲೇ ದಂಪತಿಗಳು ಸಾವನ್ನಪ್ಪಿದ್ದರು.

Loading...

Leave a Reply

Your email address will not be published.