ಕಾಂಗ್ರೆಸ್ ನಿಂದ ಸ್ಪರ್ಧಿಸಲಿದ್ದಾರೆ ನವಜೋತ್ ಸಿಂಗ್ ಸಿಧು! – News Mirchi

ಕಾಂಗ್ರೆಸ್ ನಿಂದ ಸ್ಪರ್ಧಿಸಲಿದ್ದಾರೆ ನವಜೋತ್ ಸಿಂಗ್ ಸಿಧು!

ಚುನಾವಣಾ ನೀತಿ ಸಂಹಿತೆ ರಾಜ್ಯದಲ್ಲಿ ಜಾರಿಗೆ ಬಂದ ಕೆಲ ನಿಮಿಷಗಳಲ್ಲೇ ಮಾಜಿ ಕ್ರಿಕೆಟಿಗ, ಮಾಜಿ ಸಂಸದ ನವಜೋತ್ ಸಿಂಗ್ ಸಿಧು ಕಾಂಗ್ರೆಸ್ ನಿಂದ ಸ್ಪರ್ದಿಸುತ್ತಾರೆ ಎಂದು ಸಿಧು ಪತ್ನಿ ನವ್ಜೋತ್ ಕೌರ್ ಹೇಳಿದ್ದಾರೆ.

ಶೀಘ್ರದಲ್ಲೇ ಸಿಧು ಕಾಂಗ್ರೆಸ್ ಸೇರ್ಪಡೆಯಾಗಲಿದ್ದು, ಅಮೃತಸರ ವಿಧಾನಸಭಾ ಕ್ಷೆತ್ರದಲ್ಲಿ ಸ್ಪರ್ಧಿಸಲು ಟಿಕೆಟ್ ಸಿಗುತ್ತಿದ್ದಂತೆ ಅಮೃತಸರಕ್ಕೆ ಭೇಟಿ ನೀಡುತ್ತಾರೆ ಎಂದು ಕೌರ್ ಹೇಳಿದ್ದಾರೆ.

2012 ರಲ್ಲಿ ಬಿಜೆಪಿಯಿಂದ ಗೆದ್ದಿದ್ದ ನವಜೋತ್ ಕೌರ್, ತಮ್ಮ ಕ್ಷೇತ್ರವನ್ನು ಪತಿಗೆ ಬಿಟ್ಟುಕೊಡಲಿದ್ದಾರೆ.

ಮೂರು ಬಾರಿ ಅಮೃತಸರದಿಂದ ಲೋಕಸಭೆಗೆ ಆಯ್ಕೆಯಾಗಿದ್ದ ನವಜೋತ್ ಸಿಂಗ್ ಸಿಧು, ನಂತರ ತಮ್ಮ ಕ್ಷೇತ್ರವನ್ನು ಅರುಣ್ ಜೇಟ್ಲಿಗೆ ಬಿಟ್ಟುಕೊಟ್ಟು ರಾಜ್ಯ ಸಭೆ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು. ಆದರೆ ಪಂಜಾಬ್ ರಾಜ್ಯದಲ್ಲಿ ಅವರಿಗೆ ಹೆಚ್ಚು ಪ್ರಾಶಸ್ತ್ಯ ಸಿಗದ ಕಾರಣ ಬಿಜೆಪಿ ಇಂದ ಹೊರಬಂದರು.

Loading...

Leave a Reply

Your email address will not be published.