ಸ್ಕಾರ್ಪೀನ್ ಸರಣಿಯ ಮೂರನೇ ಜಲಾಂತರ್ಗಾಮಿ ‘ಕಾರಂಜ್’ ನೌಕಾಪಡೆಗೆ ಸೇರ್ಪಡೆ

ಸ್ಕಾರ್ಪೀನ್ ಸರಣಿಯ ಮೂರನೇ ಜಲಾಂತರ್ಗಾಮಿ ‘ಕಾರಂಜ್’ ಅನ್ನು ಇಂದು ಮಡಗಾವ್ ಡಾಕ್ ನಲ್ಲಿ ನೌಕಾಪಡೆಗೆ ಸೇರ್ಪಡೆ ಮಾಡಲಾಯಿತು. ಒಟ್ಟು ಆರು ಸ್ಕಾರ್ಪೀನ್ ಸರಣಿಯ ಜಲಾಂತರ್ಗಾಮಿಗಳ ಪೈಕಿ ಕಾರಂಜ್ ಮೂರನೆಯದು. ಇದನ್ನು ಮಡಗಾವ್ ಡಾಕ್ ಲಿಮಿಟೆಡ್ ನಿರ್ಮಿಸಿದೆ.

ಅತ್ಯಂತ ಮುಂದುವರೆದ ಜಲಾಂತರ್ಗಾಮಿಗಳಲ್ಲಿ ಕಾರಂಜ್ ಕೂಡಾ ಒಂದಾಗಿದ್ದು, ಶತೃ ದೇಶಗಳು ಹೊಂದಿರುವ ಜಲಾಂತರ್ಗಾಮಿಗಳಿಗಿಂತ ಇದು ಉತ್ತಮ ಎಂದು ನೌಕಾ ಸಿಬ್ಬಂದಿ ಮುಖ್ಯಸ್ಥ ಅಡ್ಮಿರಲ್ ಸುನಿಲ್ ಲಾಂಬಾ ಅಭಿಪ್ರಾಯಪಟ್ಟಿದ್ದಾರೆ.

ಆ ವೀಡಿಯೋ ನಾನು ಅಪ್ಲೋಡ್ ಮಾಡಿದ್ದಲ್ಲ, ನನ್ನ ಕೆಲಸ ನನಗೆ ಕೊಡಿ

ಕಳೆದ ವರ್ಷ ಡಿಸೆಂಬರ್ 14 ರಂದು ಸ್ಕಾರ್ಪೀನ್ ಸರಣಿಯ ಮೊದಲ ಜಲಾಂತರ್ಗಾಮಿ ಐಎನ್ಎಸ್ ಕಲ್ವಾರಿಯನ್ನು ಪ್ರಧಾನಿ ನರೇಂದ್ರ ಮೋದಿಯವರಿಂದ ನೌಕಾಪಡೆಗೆ ಸೇರ್ಪಡೆಗೊಳಿಸಲಾಗಿತ್ತು.

ಆರು ಸ್ಕಾರ್ಪೀನ್ ಜಲಾಂತರ್ಗಾಮಿಗಳ ನಿರ್ಮಾಣ ಮತ್ತು ತಂತ್ರಜ್ಞಾನ ವರ್ಗಾವಣೆ ಒಪ್ಪಂದವನ್ನು ಫ್ರಾನ್ಸ್ ನ ನವಲ್ ಗ್ರೂಪ್ ನೊಂದಿಗೆ ಮಾಡಿಕೊಳ್ಳಲಾಗಿದ್ದು, ಮಡಗಾವ್ ಡಾಕ್ ಲಿಮಿಟೆಡ್ ಸಹಯೋಗದೊಂದಿಗೆ ಜಲಾಂಗರ್ಗಾಮಿಗಳ ನಿರ್ಮಾಣ ಮಾಡಲಾಗುತ್ತಿದೆ.

ನೀವು ತಿಳಿಯಲೇ ಬೇಕಾದ ಭಾರತದ 20 ಸಂಗತಿಗಳು

ಸ್ಕಾರ್ಪೀನ್ ಯೋಜನೆಯ ಅನುಭವ, ಇದರ ತಂತ್ರಜ್ಞಾನ ವರ್ಗಾವಣೆಯಿಂದ ಮತ್ತಷ್ಟು ಸುಧಾರಿತ ತಂತ್ರಜ್ಞಾನ ಮತ್ತು ಹೆಚ್ಚು ಮೂಲಸೌಕರ್ಯಗಳೊಂದಿಗೆ ಮುಂದಿನ ಪೀಳಿಗೆ ಜಲಾಂತರ್ಗಾಮಿಗಳನ್ನು ನಿರ್ಮಾಣ ಮಾಡಲು ಮಡಗಾವ್ ಡಾಕ್ ಲಿಮಿಟೆಡ್ ಸಿದ್ಧವಾಗಿದೆ.

Get Latest updates on WhatsApp. Send ‘Subscribe’ to 8550851559