ಲಘು ಯುದ್ಧ ವಿಮಾನ ತೇಜಸ್ ತಿರಸ್ಕರಿಸಿದ ನೌಕಾಪಡೆ, ಹೊಸ ವಿಮಾನಗಳಿಗಾಗಿ ಹುಡುಕಾಟ – News Mirchi

ಲಘು ಯುದ್ಧ ವಿಮಾನ ತೇಜಸ್ ತಿರಸ್ಕರಿಸಿದ ನೌಕಾಪಡೆ, ಹೊಸ ವಿಮಾನಗಳಿಗಾಗಿ ಹುಡುಕಾಟ

ದೇಶೀಯವಾಗಿ ನಿರ್ಮಿಸಲಾದ ನೌಕೆಯ ಆವೃತ್ತಿಯ ಲಘು ಯುದ್ಧ ವಿಮಾನ ತೇಜಸ್ ಅನ್ನು ಪ್ರಸ್ತುತ ಇರುವ ರೂಪದಲ್ಲಿ ಈಗಿರುವ ವಿಮಾನ ವಾಹಕಗಳಲ್ಲಿ ಬಳಸಲು ಅನರ್ಹ ಎಂದು ನೌಕಾಪಡೆ ಘೊಷಿಸಿದ್ದು ನಮಗೆ ತಿಳಿದದ್ದೇ. ವಿಮಾನ ವಾಹಕ ನೌಕೆಗಳಲ್ಲಿ ಬಳಸಬಹುದಾದ ಯುದ್ಧ ವಿಮಾನಗಳಿಗಾಗಿ ಭಾರತೀಯ ನೌಕಾಪಡೆ ಜಾಗತಿಕ ಬೇಟೆಯಲ್ಲಿ ತೊಡಗಿದೆ.

ವಿಮಾನವಾಹಕ ನೌಕೆಗಳಲ್ಲಿ ಸಾಗಿಸಬಹುದಾದ 57 ಬಹು ಪಾತ್ರದ ಯುದ್ಧ ವಿಮಾನಗಳನ್ನು ನೌಕಾಪಡೆಗಾಗಿ ಖರೀದಿಸಲು ರಕ್ಷಣಾ ಸಚಿವಾಲಯ ಉದ್ದೇಶಿಸಿದೆ ಎಂದು ಜನವರಿಯಲ್ಲಿ ಕೇಳಲಾದ ಮಾಹಿತಿ ಕೋರಿಕೆ(RFI)ಯಲ್ಲಿ ನೌಕಾಪಡೆ ತಿಳಿಸಿದೆ.

ಪ್ರಸ್ತುತ ಇರುವ ಲಘು ಯುದ್ಧ ವಿಮಾನ ತೇಜಸ್, ವಿಮಾನ ವಾಹಕ ನೌಕೆಗಳಲ್ಲಿ ಸಾಗಿಸಲುಅರ್ಹವಲ್ಲ ಎಂದು ಕಳೆದ ತಿಂಗಳು ನೌಕಾಪಡೆಯ ಚೀಫ್ ಅಡ್ಮಿರಲ್ ಸುನಿಲ್ ಲಾಂಬಾ ಹೇಳಿದ್ದರು. ತೇಜಸ್ ಅಭಿವೃದ್ಧಿಗೆ ಬೆಂಬಲ ಮುಂದುವರೆಯುತ್ತದೆ, ಇದೇ ವೇಳೆ ನೌಕೆಗಳಿಂದ ಆಗಸಕ್ಕೆ ಹಾರಬಲ್ಲ ಯುದ್ಧ ವಿಮಾನಗಳ ಹುಡುಕಾಟವೂ ನಡೆಯಲಿದೆ ಎಂದು ಹೇಳಿದ್ದರು.

ಸದ್ಯ ನೌಕಾಪಡೆ ರಷ್ಯಾ ನಿರ್ಮಿತ ಮಿಗ್-29ಕೆ ಎರಡು ಇಂಜಿನ್ ಸಾಮರ್ಥ್ಯದ ಯುದ್ಧ ವಿಮಾನಗಳನ್ನು ವಿಮಾನ ವಾಹಕ ನೌಕೆ ಐಎನ್‌ಎಸ್ ವಿಕ್ರಮಾದಿತ್ಯ ದಲ್ಲಿ ಬಳಸುತ್ತಿದೆ. ಸ್ವದೇಶೀ ನಿರ್ಮಿತ ವಿಮಾನ ವಾಹಕ ನೌಕೆ ವಿಕ್ರಾಂತ್ ಸೇವೆಗೆ ಸೇರಿದ ಕೂಡಲೇ ಇದೇ ಯುದ್ಧ ವಿಮಾನಗಳು ವಿಕ್ರಾಂತ್ ನೌಕೆಯಲ್ಲೂ ಹಾರಲಿವೆ ಎಂದು ಹೇಳಿದ್ದಾರೆ. ನೌಕಾ ಪಡೆಯ ಬಳಿ ಸದ್ಯ 45 ಮಿಗ್-29k ಯುದ್ಧ ವಿಮಾನಗಳಿವೆ. ಆದರೆ ಮಿಗ್-29 k ಪತನಗಳ ಇತಿಹಾಸವನ್ನು ನೋಡಿದ ಮೇಲೆ ಹೆಚ್ಚು ಮಿಗ್-29ಕೆ ಯುದ್ಧ ವಿಮಾನಗಳನ್ನು ಖರೀದಿಸಲು ನೌಕಾ ಪಡೆ ಅಸಕ್ತಿ ತೊರಿಸುತ್ತಿಲ್ಲ.

In the wake of declaring the indigenous Light Combat Aircraft (LCA) Tejas unfit for working from aircraft carriers in its present frame, the Indian Navy has started searchinh for a carrier based multi-role fighter aircraft.

Loading...

Leave a Reply

Your email address will not be published.