ಪಾಕ್ ಪ್ರಧಾನಿ ಹುದ್ದೆಯಿಂದ ಕೆಳಗಿಳಿದ ನವಾಜ್ ಷರೀಫ್ – News Mirchi

ಪಾಕ್ ಪ್ರಧಾನಿ ಹುದ್ದೆಯಿಂದ ಕೆಳಗಿಳಿದ ನವಾಜ್ ಷರೀಫ್

ಭ್ರಷ್ಟಾಚಾರ ಆರೋಪಗಳ ಹಿನ್ನೆಲೆಯಲ್ಲಿ ಪ್ರಧಾನಿ ಹುದ್ದೆಯಿಂದ ಸುಪ್ರೀಂ ಕೋರ್ಟ್ ಅನರ್ಹಗೊಳಿಸಿದ ನಂತರ, ಪಾಕ್ ಪ್ರಧಾನಿ ನವಾಜ್ ಷರೀಫ್ ಪ್ರಧಾನಿ ಹುದ್ದೆಯಿಂದ ಕೆಳಗಿಳಿದಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಷರೀಫ್ ಅವರಿಗೆ ನ್ಯಾಯ ಸಿಕ್ಕಿಲ್ಲ, ಆದರೆ ನ್ಯಾಯಾಲಯ ತೀರ್ಪನ್ನು ಗೌರವಿಸಿ ಪ್ರಧಾನಿ ಹುದ್ದೆ ತೊರೆದಿದ್ದಾರೆ ಎಂದು ಪಾಕ್ ಪ್ರಧಾನಿಯ ಅಧಿಕೃತ ವಕ್ತಾರರು ಹೇಳಿದ್ದಾರೆ.

ಪಾಕ್ ಪ್ರಧಾನಿ ಹುದ್ದೆಯಿಂದ ಅನರ್ಹಗೊಂಡ ನವಾಜ್ ಷರೀಫ್

ಪಾಕಿಸ್ತಾನದಲ್ಲಿ ಇದುವರೆಗೂ ಯಾರೂ ಪ್ರಧಾನ ಮಂತ್ರಿಯಾಗಿ 5 ವರ್ಷಗಳ ಅವಧಿಯನ್ನು ಪೂರ್ಣಗೊಳಿಸಿಲ್ಲ ಎಂಬುದು ಗಮನಾರ್ಹ. ಬಹುತೇಕ ಪ್ರಧಾನ ಮಂತ್ರಿಗಳು ಮಿಲಿಟರಿ ಹಸ್ತಕ್ಷೇಪದಿಂದ ಕೆಳಗಿಳಿದರೆ, ಮತ್ತೆ ಕೆಲವರು ತಮ್ಮ ಪಕ್ಷದಿಂದಲೇ ಹೊರದಬ್ಬಿಸಿಕೊಂಡವರು.

Loading...