ಪ್ರತಿಪಕ್ಷಗಳ ಮಹತ್ವದ ಸಭೆಗೆ ಎನ್.ಸಿ.ಪಿ ಚಕ್ಕರ್ – News Mirchi

ಪ್ರತಿಪಕ್ಷಗಳ ಮಹತ್ವದ ಸಭೆಗೆ ಎನ್.ಸಿ.ಪಿ ಚಕ್ಕರ್

ಬಿಜೆಪಿ ವಿರುದ್ಧ ಎಲ್ಲಾ ಪಕ್ಷಗಳು ಒಟ್ಟಾಗಿ ಹೋರಾಡಲು ತಂತ್ರ ರೂಪಿಸುವುದಕ್ಕಾಗಿ ಕಾಂಗ್ರೆಸ್ ನೃತೃತ್ವದ್ಲಲಿ ನಡೆದ ಮಹತ್ವದ ಸಭೆಗೆ ಎನ್.ಸಿ.ಪಿ ಪಕ್ಷ ಗೈರು ಹಾಜರಾಗಿದ್ದು, ಪ್ರತಿಪಕ್ಷಗಳ ಉದ್ದೇಶಕ್ಕೆ ಸ್ವಲ್ಪ ಹಿನ್ನಡೆಯಾಗಿದೆ.

ಎನ್.ಸಿ.ಪಿ ಮುಖ್ಯಸ್ಥ ಶರದ್ ಪವಾರ್ ಬಿಜೆಪಿ ಹತ್ತಿರವಾಗುತ್ತಾರಾ ಎಂಬ ಆತಂಕ ಪ್ರತಿಪಕ್ಷಗಳಲ್ಲಿ ಮೂಡಿದೆ. ಇತ್ತೀಚೆಗೆ ಗುಜರಾತ್ ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನ ಅಹಮದ್ ಪಟೇಲ್ ಗೆಲುವು ಪಕ್ಷಕ್ಕೆ ಸ್ವಲ್ಪ ಧೈರ್ಯ ತುಂಬಿತ್ತಾದರೂ, ಎನ್.ಸಿ.ಪಿ ಮತ್ತೆ ಕಾಂಗ್ರೆಸ್ ಅನ್ನು ನಿರಾಸೆಗಳ್ಳುವಂತೆ ಮಾಡಿದೆ.

ಮುಂದಿನ ದಿನಗಳಲ್ಲಿ ಸಮಾನ ಮನಸ್ಕ ಪಕ್ಷಗಳೆಲ್ಲಾ ಸೇರಿ ಆಡಳಿತ ಬಿಜೆಪಿ ಪಕ್ಷದ ವಿರುದ್ಧ ಹೋರಾಟ ನಡೆಸುವ ಆಧಿಕಾರವನ್ನು 16 ಪ್ರತಿಪಕ್ಷಗಳು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ನೀಡಿವೆ. ಇನ್ನು ರಾಜ್ಯಸಭೆ ಚುನಾವಣೆಯಲ್ಲಿ ಎನ್.ಸಿ.ಪಿ ಯ ಇಬ್ಬರು ಶಾಸಕರಲ್ಲಿ ಕೇವಲ ಒಬ್ಬ ಶಾಸಕರು ಮಾತ್ರ ಕಾಂಗ್ರೆಸ್ ಪರ ಮತ ಹಾಕಿದ್ದು, ಇದೀಗ ಆ ಪಕ್ಷ ಪ್ರತಿಪಕ್ಷಗಳ ಸಭೆಯಿಂದ ದೂರವುಳಿದಿದ್ದು ಕಾಂಗ್ರೆಸ್ ನಿಂದ ಎನ್.ಸಿ.ಪಿ ದೂರ ಸರಿಯುತ್ತಿದೆ ಎಂಬುದಕ್ಕೆ ಸೂಚನೆ ಎಂದು ಕೆಲವರು ಅಭಿಪ್ರಾಯಪಡುತ್ತಿದ್ದಾರೆ.

ಈ ಕುರಿತು ಸ್ಪಷ್ಟನೆ ನೀಡಿರುವ ಎನ್.ಸಿ.ಪಿ ಮುಖಂಡ ಪ್ರಫುಲ್ ಪಟೆಲ್, ನಮ್ಮ ಶಾಸಕರು ಬಿಜೆಪಿಗೆ ಮತ ಹಾಕಿರುವಂತೆ ಕಾಂಗ್ರೆಸ್ ಸುಳ್ಳು ಸುದ್ದ ಹಬ್ಬಿಸಿದೆ. ಹೀಗಾಗಿ ನಾವು ಸಭೆಯನ್ನು ಬಹಿಷ್ಕರಿಸಲು ನಿರ್ಧರಿಸಿದೆವು ಎಂದು ಹೇಳಿದ್ದಾರೆ. ನಾವು ಕಾಂಗ್ರೆಸ್ ಪಕ್ಷದ “ಬಿ” ಟಿಮ್ ಅಲ್ಲ, ಆದರೂ ಕಾಂಗ್ರೆಸ್ ಅಭ್ಯರ್ತಿ ಅಹಮದ್ ಪಟೇಲ್ ಗೆ ಮತ ಹಾಕಿದೆವು. ಆದರೆ ಕಾಂಗ್ರೆಸ್ ಸುಳ್ಳು ಸುದ್ದಿ ಹಬ್ಬಿಸಿದೆ. ಈ ಕುರಿತು ಕಾಂಗ್ರೆಸ್ ನಾಯಕ ಗುಲಾಂ ನಬೀ ಆಜಾದ್ ಅವರಿಂದ ಸ್ಪಷ್ಟನೆ ಕೋರಿದ್ದೆವು. ಆದರೆ ಇದುವರೆಗೂ ಅವರಿಂದ ಯಾವುದೇ ಉತ್ತರವಿಲ್ಲ, ಹೀಗಾಗಿಯೇ ಸಭೆಯಿಂದ ದೂರವುಳಿಯಬೇಕಾಯಿತು ಎಂದು ಪ್ರಫುಲ್ ಪಟೇಲ್ ಸ್ಪಷ್ಟಪಡಿಸಿದ್ದಾರೆ.

ಇನ್ನು ಪ್ರತಿಪ್ರಕ್ಷಗಳ ಸಭೆಯಲ್ಲಿ ಸಂಸತ್ತಿನ ಚಳಿಗಾಲದ ಅಧಿವೇಶನಗಳು ಆರಂಭವಾಗುವವರೆಗೂ ಸರ್ಕಾರದ ವಿರುದ್ಧ ಒಗ್ಗಟ್ಟಾಗಿ ಹೋರಾಡಬೇಕು ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸೂಚಿಸಿದ್ದಾರೆ. ಬಿಜೆಪಿ ಸರ್ಕಾರದ ವಿರುದ್ಧ ಕ್ಷೇತ್ರಮಟ್ಟದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳಲ್ಲಿ ಪ್ರತಿಪಕ್ಷಗಳು ಪಾಲ್ಗೊಳ್ಳಬೇಕು ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಹೇಳಿದರು.

Loading...