ಉಪರಾಷ್ಟ್ರಪತಿ ಚುನಾವಣೆಯಲ್ಲಿ ವೆಂಕಯ್ಯ ನಾಯ್ಡು ಗೆಲುವು

ಇಂದು ನಡೆದ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಎನ್.ಡಿ.ಎ ಅಭ್ಯರ್ಥಿ ವೆಂಕಯ್ಯನಾಯ್ಡು ರವರು 516 ಮತಗಳನ್ನು ಪಡೆಯುವ ಮೂಲಕ ಗೆಲುವು ಕಂಡಿದ್ದಾರೆ. ನಾಯ್ಡು ಅವರ ಪ್ರತಿಸ್ಪರ್ಧಿ, ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳ ಅಭ್ಯರ್ಥಿ ಗೋಪಾಲಕೃಷ್ಣ ಗಾಂಧಿ ಪಡೆದದ್ದು 244 ಮತಗಳು.

ಮತದಾನವಾದ ಒಟ್ಟು 771 ಮತಗಳಲ್ಲಿ, 760 ಮತಗಳು ಮಾನ್ಯವಾದ ಮತಗಳು. ಯಾವುದೇ ಅಭ್ಯರ್ಥಿ ಗೆಲ್ಲಲು 381 ಮತಗಳ ಅಗತ್ಯವಿತ್ತು. ಶೇ.98.21 ಮತದಾನವಾಗಿದ್ದು, 785 ಸಂಸತ್ ಸದಸ್ಯರಲ್ಲಿ 771 ಸದಸ್ಯರು ತಮ್ಮ ಮತದಾನದ ಹಕ್ಕು ಚಲಾಯಿಸಿದರು.

ಅಜಂಖಾನ್ ಆಪ್ತೆ ಸರೋಜಿನಿ ಅಗರ್ವಾಲ್ ಬಿಜೆಪಿ ಸೇರ್ಪಡೆ

ಇದೇ ಆಗಸ್ಟ್ 10 ರಂದು ಈಗಿನ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರ ಅಧಿಕಾರಾವಧಿ ಮುಗಿಯಲಿದ್ದು, ವೆಂಕಯ್ಯನಾಯ್ಡು ಆ ಸ್ಥಾನವನ್ನು ಅಲಂಕರಿಸಲಿದ್ದಾರೆ. ಈಗಾಗಲೇ ಬಿಜೆಪಿಯಿಂದ ಕಣಕ್ಕಿಳಿದಿದ್ದ ರಾಮನಾಥ್ ಕೋವಿಂದ್ ರಾಷ್ಟ್ರಪತಿಯಾಗಿ ಆಯ್ಕೆಯಾಗಿರುವುದು ನಮಗೆಲ್ಲಾ ತಿಳಿದಿದೆ.

ವೆಂಕಯ್ಯನಾಯ್ಡು ರವರು 2002 ರಿಂದ 2004 ರವರೆಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದವರು. ಇದಕ್ಕೂ ಮುನ್ನ ಅಟಲ್ ಬಿಹಾರಿ ವಾಜಪೇಯಿ ಅವರ ಸಂಪುಟದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರಾಗಿ ಸೇವೆ ಸಲ್ಲಿಸಿದ್ದರು.