ನ್ಯಾಯಾಧೀಶರ ನೇಮಕಕ್ಕೆ ನೀಟ್ ತರಹದ ಪ್ರವೇಶ ಪರೀಕ್ಷೆ – News Mirchi

ನ್ಯಾಯಾಧೀಶರ ನೇಮಕಕ್ಕೆ ನೀಟ್ ತರಹದ ಪ್ರವೇಶ ಪರೀಕ್ಷೆ

ಕೆಳ ನ್ಯಾಯಾಲಯಗಳ ನ್ಯಾಯಮೂರ್ತಿಗಳ ನೇಮಕಾತಿಗೆ ನೀಟ್ ತರಹದ ಪ್ರವೇಶ ಪರೀಕ್ಷೆಯನ್ನು ದೇಶಾದ್ಯಂತ ನಡೆಸುತ್ತೇವೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ನಲ್ಲಿ ಪ್ರಸ್ತಾಪ ಮಾಡಿದೆ.

ಸಿಬಿಎಸ್ಇ ನಡೆಸುತ್ತಿರುವ ನೀಟ್ ಜೊತೆಗೆ ಐಬಿಪಿಎಸ್(ಬ್ಯಾಂಕುಗಳು) ರೀತಯ ಪದ್ದತಿಗಳಲ್ಲಿ ಖಾಲಿ ಇರುವ ನ್ಯಾಯಮೂರ್ತಿಗಳ ಹುದ್ದೆಗಳನ್ನು ತುಂಬಿಸಲು ಸಾಧ್ಯ ಎಂದು ಕೇಂದ್ರ ಕಾನೂನು ಸಚಿವಾಲಯದ ಕಾರ್ಯದರ್ಶಿ ಸುಪ್ರೀಂ ಕೋರ್ಟ್ ಸೆಕ್ಟಟರಿ ಜನರಲ್ ಗೆ ಪತ್ರ ಬರೆದಿದ್ದಾರೆ. ಅಷ್ಟೇ ಅಲ್ಲದೆ ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ಪ್ರವೇಶ ಪರೀಕ್ಷೆಯನ್ನು ನಡೆಸುವ ಅಂಶವನ್ನು ಪರಿಶೀಲಿಸಬೇಕು ಎಂದು ಕೇಂದ್ರ ಮನವಿ ಮಾಡಿದೆ. ದೇಶಾದ್ಯಂತ ಕೆಳ ನ್ಯಾಯಾಲಯಗಳಲ್ಲಿ ಸದ್ಯ ಖಾಲಿ ಇರುವ 4,452 ಹುದ್ದೆಗಳನ್ನು ಭರ್ತಿ ಮಾಡಲು ಹೈಕೋರ್ಟ್ ಸೂಚನೆಯಂತೆ ಯುಪಿಎಸ್ಸಿ ಮೂಲಕ ಪರೀಕ್ಷೆ ನಡೆಸುತ್ತೇವೆ ಎಂದು ಪತ್ರದಲ್ಲಿ ಕೇಂದ್ರ ಹೇಳಿದೆ.

Contact for any Electrical Works across Bengaluru

Loading...
error: Content is protected !!