ನೇಪಾಳಕ್ಕೆ ಚೀನಾ ಇಂಟರ್ನೆಟ್, ಭಾರತದ ಏಕಸ್ವಾಮ್ಯತೆಗೆ ಧಕ್ಕೆ |News Mirchi

ನೇಪಾಳಕ್ಕೆ ಚೀನಾ ಇಂಟರ್ನೆಟ್, ಭಾರತದ ಏಕಸ್ವಾಮ್ಯತೆಗೆ ಧಕ್ಕೆ

ಇದುವರೆಗೂ ನೇಪಾಳದಲ್ಲಿ ಇಂಟರ್ನೆಟ್ ಸೇವೆಗಳ ಮೇಲೆ ಭಾರತ ಹೊಂದಿದ್ದ ಏಕಸ್ವಾಮ್ಯತೆ ಕೊನೆಯಾಗಲಿದೆ. ಇದುವರೆಗೂ ಅಂತರ್ಜಾಲ ಸೇವೆಗಳಿಗಾಗಿ ಸಂಪೂರ್ಣವಾಗಿ ಭಾರತವನ್ನು ಅವಲಂಬಿಸಿದ್ದ ನೇಪಾಳಿಗರಿಗೆ ಇನ್ನು ಮುಂದೆ ಪರ್ಯಾಯ ಆಯ್ಕೆ ಹುಟ್ಟಿಕೊಳ್ಳುತ್ತಿದೆ. ಶೀಘ್ರದಲ್ಲಿಯೇ ಚೀನಾ ಕಂಪನಿಗಳು ನೇಪಾಳದಲ್ಲಿ ಇಂಟರ್ ನೆಟ್ ಸೇವೆಗಳನ್ನು ಆರಂಭಿಸಲಿವೆ ಎಂದು ನೇಪಾಳದ ದಿನಪತ್ರಿಕೆ ವರದಿ ಮಾಡಿದೆ.

ಇದುವರೆಗೂ ಭಾರತದ ಭೈರಹಾವಾ, ಬೀರ್ಗಂಜ್ ಮತ್ತು ಬೀರತ್ ನಗರಗಳ ಮೂಲಕ ಭಾರತೀಯ ಸಂಸ್ಥೆಗಳಿಂದ ಅಂತರ್ಜಾಲ ಸೇವೆಯನ್ನು ನೇಪಾಳ ಪಡೆಯುತ್ತಿತ್ತು. ಇದೀಗ ಚೀನಾ ಕಂಪನಿಗಳು ಇಂಟರ್ನೆಟ್ ಸೇವೆಗಳನ್ನು ನೀಡಲು ಮುಂದಾಗಿದ್ದು, ಇನ್ನು ಮುಂದೆ ನೇಪಾಳಿ ಪ್ರಜೆಗಳಿಗೆ ಇಂಟರ್ನೆಟ್ ಸೇವೆಗಳಲ್ಲಿ ಭಾರತದ ಕಂಪನಿಗಳ ಜೊತೆಗೆ ಪರ್ಯಾಯ ಆಯ್ಕೆಗಳು ಸಿಕ್ಕಂತಾಗುತ್ತದೆ.

ಚೀನಾ ಸರ್ಕಾರಿ ಮಾಧ್ಯಮದಿಂದ ಮೋದಿ ಹೊಗಳಿಕೆ…!

ಈಗಾಗಲೇ ಚೀನಾ ಕಡೆಯಿಂದ ಆಪ್ಟಿಕಲ್ ಫೈಬರ್ ಹಾಕುವ ಕೆಲಸ ಭರದಿಂದ ಸಾಗಿದ್ದು, ಎಲ್ಲಾ ಅಂದುಕೊಂಡಂತೆ ನಡೆದರೆ ಆಗಸ್ಟ್ ಆರಂಭದ ವೇಳೆಗೆ ಚೀನಾದ ಅಂತರ್ಜಾಲ ಸೇವೆ ನೇಪಾಳದಲ್ಲಿ ಆರಂಭವಾಗುತ್ತದೆ ಎಂದು ನೇಪಾಳ್ ಟೆಲಿಕಾಂ ನ ವಕ್ತಾರ ಶೋಭನ್ ಅಧಿಕಾರಿ ಹೇಳಿದ್ದಾರೆ.

Loading...
loading...
error: Content is protected !!