ನೇತಾಜಿ ವಿಮಾನ ದುರಂತದಲ್ಲಿ ಸತ್ತಿಲ್ಲ! ಏನಿದೆ ಈ ಪುಸ್ತಕದಲ್ಲಿ? – News Mirchi

ನೇತಾಜಿ ವಿಮಾನ ದುರಂತದಲ್ಲಿ ಸತ್ತಿಲ್ಲ! ಏನಿದೆ ಈ ಪುಸ್ತಕದಲ್ಲಿ?

ನೇತಾಜಿ ಸುಭಾಷ್ ಚಂದ್ರ ಬೋಸ್ ನಿಗೂಢ ಕಣ್ಮರೆ ರಹಸ್ಯ ಇನ್ನೂ ಬಗೆಹರಿದಿಲ್ಲ. ಹೊಸ ಪುಸ್ತಕವೊಂದು ಅವರು ವಿಮಾನ ಅಪಘಾತದಲ್ಲಿ ಸತ್ತಿಲ್ಲ, ತನಿಖೆ ವೇಳೆ ಬ್ರಿಟೀಷರು ನೀಡಿದ ಹಿಂಸೆಯಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಿದೆ.

ನೇತಾಜಿ ವಿಮಾನ ಅಫಘಾತದಲ್ಲಿ ಸತ್ತಿರಲಿಲ್ಲ, ನೇತಾಜಿಯವರು ಸುಲಭವಾಗಿ ಸೋವಿಯತ್ ಒಕ್ಕೂಟಕ್ಕೆ ಪರಾರಿಯಾಗಲು ಅನುಕೂಲವಾಗುವಂತೆ ಜಪಾನಿನ ಗುಪ್ತಚರ ಸಂಸ್ಥೆಗಳು ಈ ಕಥೆ ಸೃಷ್ಟಿಸಿದರು ಎಂದು ನಿವೃತ್ತ ಮೇಜರ್ ಜನರಲ್ ಜಿ.ಡಿ.ಬಕ್ಷಿ ತಮ್ಮ “ಬೋಸ್ ದ ಇಂಡಿಯನ್ ಸಮೂರಾಯ್ – ನೇತಾಜಿ ಅಂಡ್ ದ ಐಎನ್‌ಎ ಮಿಲಿಟರಿ ಅಸೆಸ್ಮೆಂಟ್” ಪುಸ್ತಕದಲ್ಲಿ ಹೇಳಿದ್ದಾರೆ.

ಅಂದಿನ ಟೋಕಿಯೋದಲ್ಲಿನ ಸೋವಿಯತ್ ರಾಯಭಾರಿ ಜೇಕಬ್ ಮಲಿಕ್ ಅವರ ಸಹಕಾರದೊಂದಿಗೆ ಸೈಬೀರಿಯಾದಲ್ಲಿ ಸುಭಾಷ್ ಚಂದ್ರ ಬೋಸ್ ಅವರಿಗೆ “ಆಜಾದ್ ಹಿಂದ್ ಸರ್ಕಾರ” ವನ್ನು ಆರಂಭಿಸಲು ಸಾಧ್ಯವಾಗಿತ್ತು.

ನೇತಾಜಿಯವರು 18, ಆಗಸ್ಟ್ 1945 ರಂದು ತೈಪೆಯಲ್ಲಿ ವಿಮಾನ ದುರಂತದಲ್ಲಿ ಸಾವನ್ನಪ್ಪಿಲ್ಲ ಎಂಬುದಕ್ಕೆ ಅಲ್ಲಗೆಳೆಯಲು ಅಸಾಧ್ಯವಾದ ಸಾಕ್ಷಗಳಿವೆ ಎಂದು ಬಕ್ಷಿ ಪ್ರತಿಪಾದಿಸಿದ್ದಾರೆ.

ಎರಡನೇ ವಿಶ್ವಯುದ್ಧದ ಸಮಯದಲ್ಲಿ ಜರ್ಮನಿಯ ಬಾಂಬರ್ ಗಳಿಂದ ತಪ್ಪಿಸಿಕೊಳ್ಳಲು ಸೋವಿಯತ್ ಸರ್ಕಾರ ಅದರ ನೆಲೆಯನ್ನು ಸೈಬೀರಿಯಾಗೆ ಬದಲಾಯಿಸಿತ್ತು. ಆಗ ಜೇಕಬ್ ಮಲಿಕ್ ಸಹಾಯದಿಂದ ಬೋಸ್ ರಷ್ಯಾದಲ್ಲಿ ರಾಯಭಾರ ಕಛೇರಿಯನ್ನು ತೆರೆದಿದ್ದರು.

ಜಪಾನಿನಿಂದ ಪರಾರಿಯಾದ ನಂತರ ಬೋಸ್, ಸೈಬೀರಿಯಾದಿಂದ ಮೂರು ಬಾರಿ ರೇಡಿಯೋದಲ್ಲಿ ಮಾತನಾಡಿದ್ದರು. ಆಗಲೇ ಬ್ರಿಟೀಷರಿಗೆ ಬೋಸ್ ಜೀವಂತವಿದ್ದು, ಸೋವಿಯತ್ ಯೂನಿಯನ್ ಗೆ ಪರಾರಿಯಾಗಿರುವುದು ತಿಳಿಯಿತು ಎಂದು ಬಕ್ಷಿ ಹೇಳಿದ್ದಾರೆ.

ನಂತರ ಸೋವಿಯತ್ ಆಡಳಿತವನ್ನು ಸಂಪರ್ಕಿಸಿದ ಬ್ರಿಟೀಷ್ ಅಧಿಕಾರಿಗಳು ಬೋಸ್ ರವರನ್ನು ವಿಚಾರಣೆ ಮಾಡಲು ಅನುಮತಿ ನೀಡಲು ಒತ್ತಾಯಿಸಿದರು. ಆ ವಿಚಾರಣೆಯ ಸಮಯದಲ್ಲಿ ಬ್ರಿಟೀಷರು ನೀಡಿದ ಹಿಂಸೆಯಿಂದ ಬೋಸ್ ಸಾವನ್ನಪ್ಪಿದ್ದರು ಎಂದು ಬಕ್ಷಿ ಹೇಳಿದ್ದಾರೆ.

Loading...

Leave a Reply

Your email address will not be published.