ಗೌರಿ ಲಂಕೇಶ್ ಹತ್ಯೆ: ನಾವು ಹಾಗಂದೇ ಇಲ್ಲವೆಂದ ಖರ್ಗೆ |News Mirchi

ಗೌರಿ ಲಂಕೇಶ್ ಹತ್ಯೆ: ನಾವು ಹಾಗಂದೇ ಇಲ್ಲವೆಂದ ಖರ್ಗೆ

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಹಿಂದೆ ಬಿಜೆಪಿ, ಆರ್.ಎಸ್.ಎಸ್ ಕೈವಾಡವಿದೆ ಎಂದು ತಮ್ಮ ಪಕ್ಷ ಎಂದೂ ಹೇಳಿಲ್ಲವೆಂದು ಕಾಂಗ್ರೆಸ್ ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗೌರಿ ಲಂಕೇಶ್ ಹತ್ಯೆಯಲ್ಲಿ ಬಿಜೆಪಿ ಮತ್ತು ಆರ್.ಎಸ್.ಎಸ್ ಕೈವಾಡವಿದೆ ಎಂದು ನಾವು ಎಲ್ಲೂ ಹೇಳಿಲ್ಲ. ಆದರೆ ಖಚಿತವಾಗಿ ಇದರ ಹಿಂದೆ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿವೆ. ಆ ಕಾರಣದಿಂದಲೇ ಕೆಲವರು ಹತ್ಯೆಗೆ ಗುರಿಯಾಗುತ್ತಿದ್ದಾರೆ ಎಂದು ಖರ್ಗೆ ಹೇಳಿದರು.

ಪೊಲೀಸರು ತನಿಖೆಯನ್ನು ತ್ವರಿತಗೊಳಿಸಿ ಹಂತಕರನ್ನು ಬಂಧಿಸಬೇಕು, ಶಾಂತಿ ಸುವ್ಯವಸ್ಥೆ ಬಲಗೊಳಿಸಲು ಎಲ್ಲರೂ ಶ್ರಮಿಸಬೇಕು ಎಂದು ಹೇಳಿದರು. ಈ ಕೃತ್ಯವೆಸಗಿದವರಿಗೆ ಸರಿಯಾದ ಪಾಠ ಕಲಿಸಬೇಕು ಎಂದು ಹೇಳಿದ ಖರ್ಗೆ, ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹಸಚಿವ ರಾಮಲಿಂಗಾರೆಡ್ಡಿ ಅವರೊಂದಿಗೂ ಮಾತನಾಡಿರುವುದಾಗಿ ಹೇಳಿದರು. ಸೋನಿಯಾ ಗಾಂಧಿಯವರೂ ಈ ಘಟನೆಯಿಂದ ದಿಗ್ಭ್ರಾಂತರಾಗಿದ್ದಾರೆ ಎಂದು ಹೇಳಿದರು.

Loading...
loading...
error: Content is protected !!