ಜಮೀರ್‌ನಂತ ದೊಡ್ಡ ನಾಯಕರು ಜೆಡಿಎಸ್ ನಂತಹ ಚಿಕ್ಕ ಪಕ್ಷಕ್ಕೆ ಬೇಡ – News Mirchi

ಜಮೀರ್‌ನಂತ ದೊಡ್ಡ ನಾಯಕರು ಜೆಡಿಎಸ್ ನಂತಹ ಚಿಕ್ಕ ಪಕ್ಷಕ್ಕೆ ಬೇಡ

ಬಂಡಾಯ ಶಾಸಕರ ಜೊತೆ ಮಾತುಕತೆ ನಡೆಸುವ ಪ್ರಶ್ನೆಯೇ ಇಲ್ಲ, ಬಂಡಾಯ ಶಾಸಕರಿಗೆ ಪಕ್ಷದ ಬಾಗಿಲು ಮುಚ್ಚಿ ಹೋಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಈ ಮೂಲಕ ಪಕ್ಷದ ವಿರುದ್ದ ಬಂಡೆದ್ದ ಶಾಸಕರನ್ನು ಕ್ಷಮಿಸಿ ಪಕ್ಷದಲ್ಲಿಟ್ಟುಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಶಾಸಕ ಜಮೀರ್ ಅಹಮದ್ ಖಾನ್ ದೊಡ್ಡ ನಾಯಕರು, ಅಂತಹ ದೊಡ್ಡ ನಾಯಕರು ಜೆ.ಡಿ.ಎಸ್ ನಂತಹ ಚಿಕ್ಕ ಪಕ್ಷಕ್ಕೆ ಬೇಡ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಕುಮಾರಸ್ವಾಮಿಯವರಿಗೆ ಹೇಳಿಯೇ ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿದ್ದೇವೆ ಎಂದು ಜಮೀರ್ ಹೇಳಿದ್ದಾರಲ್ಲಾ ಎಂಬ ಪ್ರಶ್ನೆಗೆ, ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕುವಂತೆ ಸೂಚಿಸಿರಲಿಲ್ಲ, ‘ಮತ ಹಾಕುವಾಗ ಕಾಂಗ್ರೆಸ್ ಏಜೆಂಟ್ ಗೆ ತೋರಿಸಿ ಮತ ಹಾಕಿದಾಗಲೇ ಜಮೀರ್ ಬಗ್ಗೆ ತಿಳಿಯಿತು ಎಂದು ಉತ್ತರಿಸಿದರು.

Loading...

Leave a Reply

Your email address will not be published.