4ಜಿ ಸಪೋರ್ಟ್ ಮಾಡಬಲ್ಲ ಮೂರು ಸ್ಮಾರ್ಟ್ ಫೋನ್, ಬೆಲೆ ಎಷ್ಟು? – News Mirchi

4ಜಿ ಸಪೋರ್ಟ್ ಮಾಡಬಲ್ಲ ಮೂರು ಸ್ಮಾರ್ಟ್ ಫೋನ್, ಬೆಲೆ ಎಷ್ಟು?

ಭಾರತೀಯ ಸ್ಮಾರ್ಟ್ ಫೋನ್ ಮಾರುಕಟ್ಟೆಗೆ 4ಜಿ ಸಪೋರ್ಟ್ ಮಾಡಬಲ್ಲ ಮೂರು ಹೊಸ ಫೋನ್ ಗಳು ಬಿಡುಗಡೆಗೊಂಡಿವೆ. ಅಮೆರಿಕದ ಇನ್ ಫೋಕಸ್ ‘ಟರ್ಬೋ5’, ಚೀನಾದ ಲೀಫೋನ್ ನ ‘ಲೀಫೋನ್ ಡಬ್ಲ್ಯೂ2’ ಮತ್ತು ನುಬಿಯಾ ‘ಎನ್2’ ಸ್ಮಾರ್ಟ್ ಫೋನ್ ಗಳು ಬಿಡುಗಡೆಗೊಂತಹವು.

ಲೀಫೋನ್ ಡಬ್ಲ್ಯೂ-2: ಈ ಫೋನ್ ಎರಡು 4ಜಿ ಸಿಮ್ ಗಳಿಗೆ ಸಪೋರ್ಟ್ ಮಾಡುತ್ತದೆ. 1.3 ಗಿಗಾ ಹರ್ಟ್ಜ್ ಕ್ವಾಡ್ ಕೋರ್ ಪ್ರೊಸೆಸರ್, 1 ಜಿಬಿ ರ್ಯಾಮ್, 8 ಜಿಬಿ ಇಂಟರ್ನಲ್ ಮೆಮೋರಿ, 32 ಜಿಬಿವರೆಗೂ ಮೈಕ್ರೋ ಎಸ್ಡಿ ಕಾರ್ಡಿನೊಂದಿಗೆ ವಿಸ್ತರಿಸಕೊಳ್ಳಬಲ್ಲ ಸಾಮರ್ಥ್ಯ, 2 ಮೆಗಾ ಪಿಕ್ಸೆಲ್ ಹಿಂಬದಿ ಕ್ಯಾಮೆರಾ, ಮುಂಭಾಗದಲ್ಲಿ ವಿಜಿಎ ಕ್ಯಾಮೆರಾ, ಆಂಡ್ರಾಯ್ಡ್ ಮಾರ್ಷ್ ಮಾಲೋ ಆಪರೇಟಿಂಗ್ ಸಿಸ್ಟಂ, 4.5 ಇಂಚಿನ ಡಿಸ್ ಪ್ಲೇ ನಂತ ಫೀಚರ್ ಗಳನ್ನು ಈ ಫೋನ್ ಹೊಂದಿದೆ. 22 ಸ್ಥಳೀಯ ಭಾಷೆಗಳಿಗೆ ಈ ಮೊಬೈಲ್ ಸಪೋರ್ಟ್ ಮಾಡುತ್ತದೆ ಎಂದು ಕಂಪನಿ ಹೇಳುತ್ತಿದೆ. ಇದರ ಬೆಲೆ ರೂ.3,999.

ಟರ್ಬೋ-5: 4ಜಿ ಸೇವೆಗಳಿಗೆ ಸಪೋರ್ಟ್ ಮಾಡುವ ಈ ಫೋಣ್ 5.2 ಇಂಚಿನ ಹೆಚ್.ಡಿ ಐಪಿಎಸ್ 2.5ಡಿ ಗ್ಲಾಸ್ ಡಿಸ್ ಪ್ಲೇ ಹೊಂದಿದೆ. 1.3 ಗಿಗಾ ಹರ್ಟ್ಜ್ ಕ್ವಾಡ್ ಕೋರ್ ಪ್ರೊಸೆಸರ್, ಆಂಡ್ರಾಯ್ಡ್ ನೌಗಟ್ ಆಪರೇಟಿಂಗ್ ಸಿಸ್ಟಮ್, 13 ಮೆಗಾ ಪಿಕ್ಸೆಲ್ ಹಿಂಬದಿ ಕ್ಯಾಮೆರಾ, 5 ಮೆಗಾ ಪಿಕ್ಸೆಲ್ ಸೆಲ್ಫೀ ಕ್ಯಾಮೆರಾ, 5000 mAh ಬ್ಯಾಟರಿ ಸಾಮರ್ಥ್ಯವಿದೆ. 2ಜಿಬಿ ರ್ಯಾಮ್ ಮತ್ತು 16 ಜಿಬಿ ಇಂಟರ್ನಲ್ ಸ್ಟೋರೇಜ್ ಮೆಮೋರಿ ಇರುವ ಈ ಮೊಬೈಲ್ ಬೆಲೆ ರೂ. 6,999. 3ಜಿಬಿ ರ್ಯಾಮ್ ನೊಂದಿಗೆ 32ಜಿಬಿ ಇಂಟರ್ನಲ್ ಸ್ಟೋರೇಜ್ ಮೆಮೋರಿ ಇರುವ ಫೋನ್ ಬೆಲೆ ರೂ.7,999.

ಎನ್-2: ಪ್ರೀಮಿಯಂ ಸೆಗ್ಮೆಂಟ್ ನ್ಲಲಿ ಲಬ್ಯವಿರುವ ಈ ಫೋನ್ ಇದು. ಇದರಲ್ಲಿ 5.5 ಇಂಚಿನ ಹೆಚ್ಡಿ ಅಮೋಲ್ಡ್ ಡಿಸ್ ಪ್ಲೇ, 4ಜಿಬಿ ರ್ಯಾಮ್, 64 ಜಿಬಿ ಇಂಟರ್ನಲ್ ಸ್ಟೋರೇಜ್, 13 ಮೆಗಾ ಪಿಕ್ಸೆಲ್ ಹಿಂಬದಿ ಕ್ಯಾಮೆರಾ, 16 ಮೆಗಾ ಪಿಕ್ಸೆಲ್ ಮುಂಬದಿ ಕ್ಯಾಮೆರಾ, ಆಂಡ್ರಾಯ್ಡ್ ಮಾರ್ಷ್ ಮಾಲೋ, 5000 mAh ಬ್ಯಾಟರಿ ಸಾಮರ್ಥ್ಯ, ಎಂ.ಟಿ.ಕೆ ಆಕ್ಟಾಕೋರ್ ಪ್ರೊಸೆಸರ್ ನಂತಹ ಫೀಚರ್ ಗಳು ಇದರಲ್ಲಿವೆ. ಈ ಫೋನ್ ಬೆಲೆ ರೂ. 15,999. ಇದು ಅಮೆಜಾನ್ ವೆಬ್ಸೈಟಿನಲ್ಲಿ ಮಾರಾಟಕ್ಕೆ ಲಭಿಸುತ್ತದೆ ಎಂದು ಕಂಪನಿ ಹೇಳಿದೆ.

Loading...