ಮಹಿಳೆಯರೇ.. ಇನ್ನು ಫೇಸ್ಬುಕ್ ಪ್ರೊಫೈಲ್ ಚಿತ್ರ ಹಾಕಲು ಹಿಂಜರಿಯದಿರಿ, ಬಂದಿದೆ ಹೊಸ ಅಪ್ಡೇಟ್ – News Mirchi

ಮಹಿಳೆಯರೇ.. ಇನ್ನು ಫೇಸ್ಬುಕ್ ಪ್ರೊಫೈಲ್ ಚಿತ್ರ ಹಾಕಲು ಹಿಂಜರಿಯದಿರಿ, ಬಂದಿದೆ ಹೊಸ ಅಪ್ಡೇಟ್

ಈಗ ನಿಮ್ಮ ಪ್ರೊಫೈಲ್ ಚಿತ್ರದ ಭದ್ರತೆಗಾಗಿ “ಫೇಸ್ಬುಕ್ ಪ್ರೊಫೈಲ್ ಪಿಕ್ಚರ್ ಗಾರ್ಡ್” ಎಂಬ ಹೊಸ ಫೀಚರ್ ಅನ್ನು ಫೇಸ್ ಬುಕ್ ಪರಿಚಯಿಸುತ್ತಿದೆ. ಭಾರತೀಯ ಬಳಕೆದಾರರನ್ನು ಗುರಿಯಾಗಿಸಿಕೊಂಡೇ ಫೇಸ್ಬುಕ್ ಇದನ್ನು ವಿನ್ಯಾಸಗೊಳಿಸಿದೆ. ತಮ್ಮ ಫೋಟೋವನ್ನು ಪ್ರೊಫೈಲ್ ಪಿಕ್ಚರ್ ಮಾಡಿಕೊಂಡರೆ ಅದನ್ನು ಕಿಡಿಗೇಡಿಗಳು ಸೇವ್ ಮಾಡಿಕೊಟ್ಟುಕೊಂಡು ನಕಲಿ ಖಾತೆಗಳಿಗೆ ಬಳಸಿಕೊಳ್ಳುವ ಮತ್ತು ಇತರೆ ಉದ್ದೇಶಗಳಿಗಾಗಿ ದುರುಪಯೋಗ ಮಾಡಿಕೊಳ್ಳುವ ಸಾಧ್ಯತೆಗಳಿರುತ್ತವೆ.

ಈ ಕಾರಣಕ್ಕಾಗಿ ಸಾಮಾನ್ಯವಾಗಿ ಮಹಿಳೆಯರು ತಮ್ಮ ಚಿತ್ರಗಳನ್ನು ಸಾಮಾಜಿಕ ತಾಣಗಳಲ್ಲಿ ಹಾಕಲು ಹಿಂಜರಿಯುತ್ತಿರುತ್ತಾರೆ. ಇದು ಫೇಸ್ಬುಕ್ ಸಂಸ್ಥೆಯ ಗಮನಕ್ಕೂ ಬಂದಿದೆ. ಹಾಗಾಗಿ ಅಂತಹವರಿಗಾಗಿಯೇ ಈ ಹೊಸ ಭದ್ರತಾ ವೈಶಿಷ್ಯದ ಅಪ್ಡೇಟ್. ಈ ಹೊಸ ಅಪ್ಡೇಟ್ ನಿಂದಾಗಿ ಮಹಿಳೆಯರು ಯಾವುದೇ ಹಿಂಜರಿಕೆಯಿಲ್ಲದೆ ಪ್ರೊಫೈಲ್ ಪಿಕ್ಚರ್ ಗೆ ತಮ್ಮ ಫೋಟೋ ಹಾಕಬಹುದು.

ಭಾರತೀಯ ಫೇಸ್ಬುಕ್ ಬಳಕೆದಾರರಿಗೆ ಪ್ರೊಫೈಲ್ ಪಿಕ್ಚರ್ ಗಾರ್ಡ್ ಹೇಗೆ ಬಳಸುವುದು ಎಂಬುದರ ಕುರಿತು ಸಲಹೆಗಳು ತೋರಿಸುತ್ತದೆ. ಈ ಹೊಸ ಟೂಲ್ ಬಳಸಿ ನಿಮ್ಮ ಪ್ರೊಫೈಲ್ ಪಿಕ್ಚರ್ ದುರುಪಯೋಗವಾಗದಂತೆ ಹೇಗೆ ತಡೆಯುವುದು ಎಂಬುದನ್ನು ನಾವಿಲ್ಲಿ ತಿಳಿಸಲಿದ್ದೇವೆ.

ಮೊದಲು ನಿಮ್ಮ ಮೊಬೈಲ್ ನಲ್ಲಿ ಫೇಸ್ಬುಕ್ ಅಪ್ಲಿಕೇಷನ್ ಅನ್ನು ಅಪ್ಡೇಟ್ ಮಾಡಿ. ನಂತರ ಫೇಸ್ಬುಕ್ ನ್ಯೂಸ್ ಫೀಡ್ ರಿಫ್ರೆಶ್ ಮಾಡಿ. ಹೊಸ ಫೀಚರ್ (Help protect your profile picture) ಸಕ್ರಿಯಗೊಳಿಸುವಂತೆ ಸಂದೇಶ ನ್ಯೂಸ್ ಫೀಡ್ ನಲ್ಲಿ ಕಾಣಿಸುತ್ತದೆ. Next ಕ್ಲಿಕ್ ಮಾಡಿ, ನಂತರ ಸೇವ್ ಮಾಡಿ. ಪಿಕ್ಚರ್ ಗಾರ್ಡ್ ಟೂಲ್ ಆಕ್ಟಿವೇಟ್ ಮಾಡಿದ ನಂತರ, ನಿಮ್ಮ ಪ್ರೊಫೈಲ್ ಪಿಕ್ಚರ್ ಮೇಲೆ ಕ್ಲಿಕ್ ಮಾಡಿ, ಅಲ್ಲಿ ಎಂದಿನಂತೆ ಕಾಣುವ ಕೆಲವು ಆಯ್ಕೆಗಳಲ್ಲಿ ಹೊಸದಾಗಿ ಪಿಕ್ಚರ್ ಗಾರ್ಡ್ ಆಯ್ಕೆ ಸೇರ್ಪಡೆಯಾಗಿರುತ್ತದೆ. ಅದನ್ನು ಆಯ್ಕೆ ಮಾಡಿ. ಈಗ ನಿಮ್ಮ ಪ್ರೊಫೈಲ್ ಪಿಕ್ಚರ್ ಸುತ್ತಲೂ ನೀಲಿ ಬಣ್ಣದ ಬಾರ್ಡರ್ ಕಾಣಿಸುತ್ತದೆ. ಅದರ ಅರ್ಥ ನಿಮ್ಮ ಪ್ರೊಫೈಲ್ ಪಿಕ್ಚರ್ ಈಗ ಸುರಕ್ಷಿತ.

ಈಗ ನಿಮ್ಮ ಪ್ರೊಫೈಲ್ ಚಿತ್ರವನ್ನೂ ಯಾರೂ ಸೇವ್ ಮಾಡಲು ಸಾಧ್ಯವಿಲ್ಲ. ಕೆಲ ಬುದ್ದಿವಂತರು ತಮ್ಮ ಸ್ಮಾರ್ಟ್ ಫೋನ್ ಗಳಿಂದ ಸ್ಕ್ರೀನ್ ಶಾಟ್ ತೆಗೆದು ನಂತರ ಕ್ರಾಪ್ ಮಾಡಿ ಬಳಸುವಂತಹವರೂ ಇರುತ್ತಾರೆ. ಈಗ ಅದಕ್ಕೂ ಕಡಿವಾಣ ಬೀಳಲಿದೆ ಎನ್ನಲಾಗುತ್ತಿದೆ. ಆದರೆ ಕೆಲವು ಬಳಕೆದಾರರು ಹೇಳುವ ಪ್ರಕಾರ ಕೆಲವೊಂದು ಸ್ಮಾರ್ಟ್ ಫೋನ್ ಗಳಲ್ಲಿ ಈ ಅಪ್ಡೇಟ್ ಬಂದ ನಂತರವೂ ಸ್ಕ್ರೀನ್ ಶಾಟ್ ತೆಗೆಯಲು ಸಾಧ್ಯವಿದೆಯಂತೆ. ಅದರೆ ಸೇವ್ ಮಾಡಲು ಸಾಧ್ಯವಿಲ್ಲವಷ್ಟೇ. ಹೀಗಾಗಿ ಇನ್ನಷ್ಟು ಭದ್ರತೆ ಬೇಕಾದಲ್ಲಿ ನಿಮ್ಮ ಪ್ರೊಫೈಲ್ ಚಿತ್ರ ಮೇಲೆ ಕೆಲವೊಂದು ಡಿಸೈನ್ ಗಳನ್ನು ವಾಟರ್ ಮಾರ್ಕ್ ಆಗಿ ಬಳಸಬಹುದು. ಫೇಸ್ಬುಕ್ ಪ್ರಕಾರ ಇಂತಹ ವಾಟರ್ ಮಾರ್ಕ್ ಇರುವ ಚಿತ್ರಗಳನ್ನು ಜನರು ಕದಿಯಲು ಇಷ್ಟಪಡುವುದಿಲ್ಲವಂತೆ.

 

Contact for any Electrical Works across Bengaluru

Loading...
error: Content is protected !!