ವಾಟ್ಸಾಪ್ ಗೆ ಮತ್ತೊಂದು ಹೊಸ ಫೀಚರ್ – News Mirchi

ವಾಟ್ಸಾಪ್ ಗೆ ಮತ್ತೊಂದು ಹೊಸ ಫೀಚರ್

ವಾಟ್ಸಾಪ್ ಬಳಕೆದಾರರಿಗೆ ಸಿಹಿ ಸುದ್ದಿ. ವಾಟ್ಸಾಪ್ ನಲ್ಲಿ ಮತ್ತೊಂದು ಫೀಚರ್ ಸೇರಿದೆ. ವಾಟ್ಸಾಪ್ ಬಳಕೆದಾರರು ಹೆಚ್ಚಾಗಿ ವಾಟ್ಸಾಪ್ ಸ್ಟೇಟಸ್ ಅನ್ನು ವಿಭಿನ್ನವಾಗಿ ಹಾಕಲು ಇಷ್ಟಪಡುತ್ತಾರಂತೆ. ಹಾಗಾಗಿ ಈಗ ಬಂದಿರುವ ಹೊಸ ಫೀಚರ್ ಬಳಸಿ ತಮಗೆ ಇಷ್ಟ ಬಂದಂತೆ ಬಳಕೆದಾರರು ಸ್ಟೇಟಸ್ ಬದಲಿಸಿಕೊಳ್ಳಬಹುದು. ಫೋಟೋ, ವೀಡಿಯೋ, ಎಮೋಜಿ, ಜಿಐಎಫ್ ಫಾರ್ಮಾಟ್ ಫೋಟೋಗಳು, ಅನಿಮೇಷನ್ಸ್, ಡ್ರಾಯಿಂಗ್ಸ್, ಸ್ಮೈಲೀಸ್… ಹೀಗೆ ನಿಮ್ಮ ಸ್ಟೇಟಸ್ ನಲ್ಲಿ ಹಾಕಿಕೊಳ್ಳಬಹುದು.

ನಿಮ್ಮ ಕಾಂಟಾಕ್ಟ್ ಲಿಸ್ಟ್ ಎಲ್ಲರಿಗೂ ಕಾಣಿಸುತ್ತದೆ, ನೀವು ನಿಮ್ಮ ಸ್ಟೇಟಸ್ ನಲ್ಲಿ ಏನೇ ಬದಲಾವಣೆ ಮಾಡಿದರೂ ನಿಮ್ಮ ಕಾಂಟಾಕ್ಟ್ ಲಿಸ್ಟ್ ನಲ್ಲಿರುವವರಿಗೆ ಅಪ್ಡೇಟ್ಸ್ ಹೋಗುತ್ತದೆ. ವಿಶ್ವಾದ್ಯಂತ ವಾಟ್ಸಾಪ್ ಗೆ 1.2 ಬಿಲಿಯನ್ ಬಳಕೆದಾರರಿದ್ದಾರೆ. ಅವರಿಗೆಲ್ಲಾ ಈ ಫೀಚರ್ ಶೀಘ್ರದಲ್ಲೇ ಲಭ್ಯವಾಗಲಿದೆ ಎಂದು ವಾಟ್ಸಾಪ್ ಸಂಸ್ಥೆ ಅಧಿಕೃತವಾಗಿ ಪ್ರಕಟಿಸಿದೆ.

Loading...

Leave a Reply

Your email address will not be published.