ಕೇಂದ್ರದಿಂದ ಪದವೀಧರರಿಗೆ ಬೆಂಗಳೂರಿನಲ್ಲಿ ಜಿಎಸ್ಟಿ ಸರ್ಟಿಫಿಕೇಟ್ ಕೋರ್ಸ್ – News Mirchi

ಕೇಂದ್ರದಿಂದ ಪದವೀಧರರಿಗೆ ಬೆಂಗಳೂರಿನಲ್ಲಿ ಜಿಎಸ್ಟಿ ಸರ್ಟಿಫಿಕೇಟ್ ಕೋರ್ಸ್

ಸರಕು ಸೇವಾ ತೆರಿಗೆ(ಜಿಎಸ್ಟಿ) ಕುರಿತು ಸಂಪೂರ್ಣ ಅರಿವು ಮೂಡಿಸಿ ತರಬೇತಿ ಪಡೆದ ವೃತ್ತಿಪರರನ್ನು ಸೃಷ್ಟಿಸಲು, ಪದವೀಧರರಿಗೆ ಕೇಂದ್ರ ಕೌಶಲ್ಯ ಅಭಿವೃದ್ಧಿ ಮತ್ತು ವಾಣಿಜ್ಯೋದ್ಯಮ ಸಚಿವಾಲಯವು ಜಿಎಸ್ಟಿ ಸರ್ಟಿಫಿಕೇಟ್ ಕೋರ್ಸ್ ಅನ್ನು ಆರಂಭಿಸಲಿದೆ.

100 ಗಂಟೆಗಳ ತರಗತಿಗಳ ಈ ಹೊಸ ಕೋರ್ಸ್ ಅನ್ನು ಪ್ರಾಯೋಗಿಕ ಯೋಜನೆಯನ್ನಾಗಿ ಇದೇ ತಿಂಗಳು 15 ಭೂಪಾಲ್, ದೆಹಲಿ, ಬೆಂಗಳೂರು ನಗರಗಳಲ್ಲಿ ಆರಂಭಿಸಲಿದ್ದಾರೆ.

ಚಾರ್ಟರ್ಡ್ ಅಕೌಂಟೆಂಟ್ಸ್, ಕಂಪನಿಗಳ ಕಾರ್ಯದರ್ಶಿಗಳು, ಕಾಮರ್ಸ್, ಬ್ಯಾಂಕಿಂಗ್ ಕ್ಷೇತ್ರಗಳ ಪದವೀಧರರು ಮುಂತಾದವರು ಈ ತರಬೇತಿ ಸರ್ಟಿಫಿಕೇಟ್ ಕೋರ್ಸ್ ಗಾಗಿ ಅರ್ಜಿ ಸಲ್ಲಿಸಬಹುದು. ಹೊಸ ತೆರಿಗೆ ವಿಧಾನವಾದ ಜಿಎಸ್ಟಿಯಲ್ಲಿ ತೆರಿಗೆ ದರ, ಜಿಎಸ್ಟಿ ಅಡಿಯಲ್ಲಿ ನೋಂದಣಿ, ಯಾವ ಯಾವ ಪದ್ದತಿಗಳಲ್ಲಿ ತೆರಿಗೆಗಳನ್ನು ಹೇಗೆ ಪರಿಗಣಿಸುತ್ತಾರೆ ಮುಂತಾದ ವಿಷಯಗಳನ್ನು ಈ ಕೋರ್ಸ್ ಗಳಲ್ಲಿ ಕಲಿಸಲಾಗುತ್ತದೆ.

ಗೊಬ್ಬರ ದರಗಳ ಬದಲಾವಣೆಗೆ ಅನುಮತಿ
ಜಿಎಸ್ಟಿ ಜಾರಿಯಾಗುವುದಕ್ಕೂ ತಯಾರಾದ ಗೊಬ್ಬರಗಳ ದರಗಳನ್ನು ತಿದ್ದುಪಡಿ ಮಾಡಿಕೊಳ್ಳಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಇದರಿಂದಾಗಿ ಸುಮಾರು 10 ಲಕ್ಷ ಟನ್ ಹಳೆ ಗೊಬ್ಬರಕ್ಕೆ ಕಂಪನಿಗಳು ಜಿಎಸ್ಟಿ ಪ್ರಕಾರ ದರಗಳನ್ನು ಮುದ್ರಿಸಿಕೊಳ್ಳಬಹುದು. ಜಿಎಸ್ಟಿ ಯಲ್ಲಿ ಗೊಬ್ಬರಗಳ ಮೇಲಿನ ತೆರಿಗೆಯನ್ನು ಶೇ.12 ರಿಂದ ಶೇ.5ಕ್ಕೆ ಕಡಿತಗೊಳಿಸಲಾಗಿದೆ. ಹೀಗಾಗಿ ಗೊಬ್ಬರಗಳ ರೀಟೇಲ್ ದರಗಳಲ್ಲಿ ಕಡಿತವಾಗಲಿದೆ.

Loading...