ಆದಾಯ ತೆರಿಗೆ ಮಿತಿಯಲ್ಲಿ ಬದಲಾವಣೆ?

ನವ ದೆಹಲಿ: ಆದಾಯ ತೆರಿಗೆ ಮಿತಿಯಲ್ಲಿ ಬದಲಾವಣೆಗಳಾಗುವ ಸಾಧ್ಯತೆ ಇದೆ. ಈಗಿರುವ ತೆರಿಗೆ ವಿನಾಯಿತಿಯನ್ನು ರೂ‌ 2.5 ಲಕ್ಷಗಳಿಂದ ರೂ. 4 ಲಕ್ಷಗಳಿಗೆ ಕೇಂದ್ರ ಸರ್ಕಾರ ಏರಿಸಬಹುದು ಎಂಬ ಮಾಹಿತಿಗಳು ಲಭ್ಯವಾಗಿವೆ.

ರೂ. 4 ಲಕ್ಷಗಳಿಂದ ರೂ. 10 ಲಕ್ಷಗಳವರೆಗಿನ ಆದಾಯಕ್ಕೆ ಶೇ.10 ರಷ್ಟು ತೆರಿಗೆ ವಿಧಿಸುವ ಸಾಧ್ಯತೆಗಳಿವೆ. ರೂ. 10 ಲಕ್ಷಗಳಿಂದ ರೂ. 15 ಲಕ್ಷಗಳ ವರೆಗಿನ ಆದಾಯಕ್ಕೆ ಶೇ.15 ರಷ್ಟು ತೆರಿಗೆ, ರೂ. 15 ಲಕ್ಷಗಳಿಂದ ರೂ. 20 ಲಕ್ಷಗಳವರೆಗೆ ಶೇ.20 ತೆರಿಗೆ, ರೂ. 20 ಲಕ್ಷಗಳಿಗಿಂತ ಮೇಲ್ಪಟ್ಟ ಆದಾಯಕ್ಕೆ ಶೇ. 30 ರಷ್ಟು ತೆರಿಗೆ ವಿಧಿಸಬಹುದು ಎನ್ನಲಾಗುತ್ತಿದೆ.

ಆದಾಯ ತೆರಿಗೆ ಮಿತಿಗಳಲ್ಲಿ ಬದಲಾವಣೆಗಳಾಗುತ್ತವೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಆದರೆ ಈ ರೀತಿಯ ಸುದ್ದಿಗಳನ್ನು ಕೇಂದ್ರ ಸರ್ಕಾರದ ವಕ್ತಾರರಾದ ಫ್ರಾಂಕ್ ನೋರೋನ್ ಅಲ್ಲಗೆಳೆದಿದ್ದಾರೆ.

Loading...

Leave a Reply

Your email address will not be published.

error: Content is protected !!