ಗೂಗಲ್ ನಲ್ಲಿ ಹೊಸ ಮೂವೀ ಕೇವಲ ರೂ.20

ಹೊಸ ಚಲನಚಿತ್ರಕ್ಕೆ ಟಿಕೆಟ್ ಸಿಗದೆ ನಿರಾಸೆಗೊಳ್ಳುತ್ತಾರೆ ಅಭಿಮಾನಿಗಳು. ಇಂತಹವರಿಗಾಗಿಯೇ ಗೂಗಲ್ ಭರ್ಜರಿ ಕೊಡುಗೆಯೊಂದನ್ನು ನೀಡುತ್ತಿದೆ. ಕೇವಲ ರೂ.20 ಪಾವತಿಸಿ ಹೊಸ ಚಲನ ಚಿತ್ರಗಳನ್ನು ಗೂಗಲ್ ಅನ್ಲೈನ್ ಸ್ಟ್ರೀಮ್ ನಲ್ಲಿ ನೋಡುವ ಸೌಲಭ್ಯ ಕಲ್ಪಿಸುತ್ತಿದೆ.

ಈ ಕೊಡುಗೆ ಕ್ರಿಸ್ಮಸ್ ದಿನದಿಂದ ಆರಂಭಗೊಂಡು ಜನವರಿ 23 ರವರೆಗೆ ಮುಂದುವರೆಯುತ್ತದೆ ಎಂದು ಗೂಗಲ್ ಸಂಸ್ಥೆ ಹೇಳಿದೆ.

ಬಿಡುಗಡೆಯಾದ ಚಿತ್ರಗಳನ್ನು ಇಂಟರ್ನೆಟ್ ಸಂಪರ್ಕವಿರುವ ಪ್ರತಿ ಮನೆಯಲ್ಲಿ ಕುಟುಂಬದೊಂದಿಗೆ ಹೋಮ್ ಥಿಯೇಟರಿನಲ್ಲಿ ನೋಡುತ್ತಾ ಎಂಜಾಯ್ ಮಾಡಬಹುದು.

ಗೂಗಲ್ ಆಫರ್ ಮಾಡುತ್ತಿರುವ ಚಿತ್ರಗಳಲ್ಲಿ ಹೊಸ ಚಲನಚಿತ್ರಗಳು ಸೆರಿದಂತೆ ಹಾಲಿವುಡ್ ಬ್ಲಾಕ್ ಬಸ್ಟರ್ ಚಿತ್ರಗಳು, ಜಾಸನ್ ಬೋರ್ನ್, ಸೂಸೈಡ್ ಸ್ಕ್ವಾಡ್, ಫೈಂಡಿಂಗ್ ಡೋರಿ, ದ ಜಂಗಲ್ ಬುಕ್, ಎಕ್ಸ್-ಮೆನ್, ಕ್ಯಾಪ್ಟನ್ ಅಮೆರಿಕಾ, ಸಿವಿಲ್ ವಾರ್ ಮುಂತಾದ ಹಲವು ಹಾಲಿವುಡ್ ಚಿತ್ರಗಳಿವೆ. ಬಾಲಿವುಡ್ ನಟ ಅಮೀರ್ ಖಾನ್ ನ ಚಿತ್ರವೂ ಇದರಲ್ಲಿ ಸೇರಿದೆ.

Loading...

Leave a Reply

Your email address will not be published.

error: Content is protected !!