ಜಿಯೋ ಗ್ರಾಹಕರಿಗೆ ಬಂತು ಗುಡ್ ನ್ಯೂಸ್… – News Mirchi

ಜಿಯೋ ಗ್ರಾಹಕರಿಗೆ ಬಂತು ಗುಡ್ ನ್ಯೂಸ್…

ಜಿಯೋ ಗ್ರಾಹಕರಿಗೆ ರಿಲಯನ್ಸ್ ಜಿಯೋ ಮುಖ್ಯಸ್ಥ ಮುಖೇಶ್ ಅಂಬಾನಿ ಗುಡ್ ನ್ಯೂಸ್ ಹೇಳಿದ್ದಾರೆ. ಜಿಯೋ ಸಿಮ್ ಹೊಂದಿರುವವರಿಗೆ ನೀಡುತ್ತಿರುವ ಉಚಿತ ಸೇವೆಗಳನ್ನು ಮುಂದಿನ ಮಾರ್ಚ್ 31 ರವರೆಗೆ ವಿಸ್ತರಿಸುತ್ತಿರುವುದಾಗಿ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಅಧಿಕೃತವಾಗಿ ಪ್ರಕಟಿಸಿದ್ದಾರೆ.

ಇಂದು ನಡೆದ ಪಾಲುದಾರರ ಸಭೆಯಲ್ಲಿ ಮುಖೇಶ್ ಈ ಘೋಷಣೆ ಮಾಡಿದ್ದಾರೆ. ಫೇಸ್ಬುಕ್ ಗಿಂತಲೂ ವೇಗವಾಗಿ ಜಿಯೋ ಸೇವೆಗಳು ದೇಶದಲ್ಲಿ ವಿಸ್ತರಿಸಿವೆ ಎಂದು ಅಂಬಾನಿ ಹರ್ಷ ವ್ಯಕ್ತಪಡಿಸಿದರು. ಸದ್ಯ 5 ಕೋಟಿ ಜನ ಜಿಯೋ ಸಿಮ್ ಬಳಸುತ್ತಿದ್ದಾರೆ, ನಂಬರ್ ಪೋರ್ಟಿಬಿಲಿಟಿ ಸ್ವೀಕರಿಸಲು ಜಿಯೋ ಸಿದ್ಧವಾಗಿದೆ ಎಂದರು.

ಡಿಸೆಂಬರ್ 1 ರಿಂದ 100 ನಗರಗಳಲ್ಲಿ ಮನೆಗೇ ಜಿಯೋ ಸಿಮ್ ಸೌಲಭ್ಯ ನೀಡುತ್ತೇವೆ ಎಂದರು. ಯಾವುದೇ ಸಮಸ್ಯೆ ಎದುರಾದರೂ ಉಚಿತ ಸೇವೆಗಳನ್ನು ವಿಸ್ತರಿಸುತ್ತೇವೆ ಎಂದರು. ಹ್ಯಾಪಿ ನ್ಯೂ ಇಯರ್ ಕೊಡುಗೆಯಡಿ ಈ ಉಚಿತ ಸೇವೆ ವಿಸ್ತರಿಸುತ್ತಿರುವುದಾಗಿ ಮುಖೇಶ್ ಅಂಬಾನಿ ಹೇಳಿದರು.

Loading...

Leave a Reply

Your email address will not be published.