ಒಂದೇ ದಿನ ಇಬ್ಬರು ಪ್ರಧಾನಿಗಳ ರಾಜೀನಾಮೆ!

ವೆಲ್ಲಿಂಗ್ಟನ್: ವಿಶ್ವ ರಾಜಕೀಯದಲ್ಲಿ ಎರಡು ಮಹತ್ವದ ಬೆಳವಣಿಗೆಗಳಾಗಿವೆ. ಸೋಮವಾರ ನ್ಯೂಜಿಲೆಂಡ್ ಪ್ರಧಾನಿ ಜಾನ್ ಕೀ ರಾಜೀನಾಮೆ ನೀಡುವುದಾಗಿ ಪ್ರಕಟಿಸಿದರೆ, ಇದೇ ದಿನ ಇಟಲಿ ಪ್ರಧಾನಿ ಮಟ್ಟೆಯೊ ರೆಂಜೀ ಕೂಡಾ ರಾಜೀನಾಮೆ ಮಾಡಿದ್ದಾರೆ.

8 ವರ್ಷಗಳಿಂದ ನ್ಯೂಜಿಲೆಂಡ್ ಪ್ರಧಾನಮಂತ್ರಿ ಆಗಿ ಮುಂದುವರೆಯುತ್ತಾ, ಜನಪ್ರಿಯ ನಾಯಕನೆಂದು ಗುರುತಿಸಿಕೊಂಡಿರುವ ಜಾನ್ ಕೀ, ಮುಂದಿನ ವರ್ಷ ನಡೆಯಲಿರುವ ಚುನಾವಣೆಯಲ್ಲೂ ಸ್ಪರ್ಧಿಸುತ್ತಾರೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಜನರಲ್ಲಿ ಉತ್ತಮ ನಾಯಕನೆಂಬ ಭಾವನೆ ಇದ್ದಾಗಲೇ ಹುದ್ದೆಯಿಂದ ಕೆಳಗಿಳಿಯಬೇಕು ಎಂದು ತೀರ್ಮಾನಿಸಿರುವ ಜಾನ್ ಕೀ ಈ ನಿರ್ಧಾರಕ್ಕೆ ಬಂದಿದ್ದಾರೆ.

ನ್ಯೂಜಿಲೆಂಡ್ ಪ್ರಧಾನಿ ಸ್ವ ಇಚ್ಛೆಯಿಂದ ರಾಜೀನಾಮೆ ನಿರ್ಧಾರ ಪ್ರಕಟಿಸಿದರೆ, ಇಟಲಿ ಪ್ರಧಾನಿ ರೆಂಜೀ ರಾಜೀನಾಮೆ ನೀಡಿದ್ದಾರೆ. ಸಂವಿಧಾನ ತಿದ್ದುಪಡಿ ಕುರಿತ ಜನಾಭಿಪ್ರಾಯ ಸಂಗ್ರಹದಲ್ಲಿ ಫಲಿತಾಂಶ ವಿರುದ್ಧವಾಗಿ ಬಂದ ಕಾರಣ ರಾಜೀನಾಮೆ ನೀಡಿದ್ದಾರೆ.