ಜಿಯೋ ಎಫೆಕ್ಟ್, ಏರ್ಟೆಲ್ 4ಜಿ ಹಾಟ್ ಸ್ಪಾಟ್ ಬೆಲೆ ಶೇ.50 ಕಡಿತ – News Mirchi

ಜಿಯೋ ಎಫೆಕ್ಟ್, ಏರ್ಟೆಲ್ 4ಜಿ ಹಾಟ್ ಸ್ಪಾಟ್ ಬೆಲೆ ಶೇ.50 ಕಡಿತ

ರಿಲಯನ್ಸ್ ಜಿಯೋ ನ ‘ಜಿಯೋಫೈ’ದೊಂದಿಗೆ ಸ್ಪರ್ಧಿಸಲು ಭಾರ್ತಿ ಏರ್ಟೆಲ್ ತನ್ನ 4ಜಿ ಹಾಟ್ ಸ್ಪಾಟ್ ಮತ್ತು 4ಜಿ ಡಾಂಗಲ್ ಬೆಲೆಗಳನ್ನು ಶೇ.50 ರಷ್ಟು ಕಡಿತಗೊಳಿಸಿದೆ. ಇದುವರೆಗೂ ರೂ.1,950 ಕ್ಕೆ ಮಾರಾಟವಾಗುತ್ತಿದ್ದ ಏರ್ಟೆಲ್ 4ಜಿ ಹಾಟ್ ಸ್ಪಾಟ್ ಈಗ ಕೇವಲ ರೂ.999 ಕ್ಕೆ ಸಿಗಲಿದೆ.

ಅಷ್ಟೇ ಅಲ್ಲದೆ 4ಜಿ ಡಾಂಗಲ್ ಬೆಲೆಯಲ್ಲೂ ಶೇ.50 ರಷ್ಟು ಕಡಿತ ಮಾಡಿರುವ ಏರ್ಟೆಲ್, ಈಗ ರೂ.1,500 ರೂಪಾಯಿಗೆ ಇಳಿಸಿದೆ. ಇದುವರೆಗೂ ಇದು ರೂ.3,000 ಕ್ಕೆ ಮಾರಾಟವಾಗುತ್ತಿತ್ತು.

10 ಡಿವೈಸ್ ಗಳಿಗೆ ಸಪೋರ್ಟ್ ಮಾಡುವ ಏರ್ಟೆಲ್ 4ಜಿ ಹಾಟ್ ಸ್ಪಾಟ್ ಗೆ ಯಾವುದೇ ಯುಎಸ್ಬಿ ಸಂಪರ್ಕ ಬೇಕಿಲ್ಲ. ಆರು ಗಂಟೆಗಳು ನಡೆಯುವ 1500mAh ಬ್ಯಾಟರಿ ಸಮಾರ್ಥ್ಯವನ್ನು ಇದು ಹೊಂದಿದೆ ಎಂದು ಕಂಪನಿಯ ವೆಬ್ಸೈಟ್ ಹೇಳುತ್ತಿದೆ. 4ಜಿ ಮಾತ್ರವಲ್ಲದೆ ಇದು 3ಜಿ ಮತ್ತು 2ಜಿ ಸಂಪರ್ಕ ಆಯ್ಕೆಗಳನ್ನೂ ಹೊಂದಿದೆ.

ರಿಲಯನ್ಸ್ ಜಿಯೋ ತನ್ನ ಜಿಯೋಫೈ ಡಿವೈಸ್ ಗಳನ್ನು ಕ್ಯಾಶ್ ಬ್ಯಾಕ್ ಕೊಡುಗೆಗಳೊಂದಿಗೆ ನೀಡುತ್ತಿದ್ದು, ಈ ಡಿವೈಸ್ ಗಳು ರೂ.999 ಕ್ಕೆ ಮಾರುಕಟ್ಟೆಯಲ್ಲಿ ಲಭ್ಯವಿದೆ. ಹೆಚ್ಡಿ ವಾಯ್ಸ್ ಕಾಲಿಂಗ್ ಸೇವೆಗಳನ್ನು ಹೊಂದಿರುವ ಜಿಯೋಫೈ ಮೂಲಕ 10 ವಿವಿಧ ಡಿವೈಸ್ ಗಳಿಗೆ ಸಂಪರ್ಕ ಕಲ್ಪಿಸಬಹುದು. ಇದರ ಬ್ಯಾಟರರಿ ಸಮಾರ್ಥ್ಯ 2300mAh.

Get Latest updates on WhatsApp. Send ‘Add Me’ to 8550851559

Loading...