ಗೋಡೆ ಮೇಲೆ 'ನಾನು ಬಡವ' ಬರಹ, ರಾಜಸ್ಥಾನ ಸರ್ಕಾರಕ್ಕೆ ನೋಟೀಸ್ |News Mirchi

ಗೋಡೆ ಮೇಲೆ ‘ನಾನು ಬಡವ’ ಬರಹ, ರಾಜಸ್ಥಾನ ಸರ್ಕಾರಕ್ಕೆ ನೋಟೀಸ್

ರಿಯಾಯಿತಿ ದರದಲ್ಲಿ ಪಡಿತರ ಪಡೆಯುವ ಫಲಾನುಭವಿಗಳನ್ನು ಗುರುತಿಸಲು ಅನುಕೂಲವಾಗುವಂತೆ ಸುಮಾರು 50 ಸಾವಿರ ಕುಟುಂಬಗಳ ಮನೆಗಳ ಮೇಲೆ “ನಾನು ಬಡವ” ಎಂದು ಬರೆದಿರುವ ವಿಷಯಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ರಾಜಸ್ಥಾನ ಸರ್ಕಾರಕ್ಕೆ ನೋಟೀಸ್ ಜಾರಿ ಮಾಡಿದೆ. ಸರ್ಕಾರದ ಮಖ್ಯ ಕಾರ್ಯದರ್ಶಿಗೆ ನೋಟೀಸ್ ನೀಡಲಾಗಿದ್ದು, ನೋಟೀಸ್ ಗೆ ಉತ್ತರಿಸಲು ನಾಲ್ಕು ವಾರಗಳು ಗಡುವು ನೀಡಿದೆ.

ಗೋಡೆಗಳ ಮೇಲೆ ‘ನಾನು ಬಡವ’ ಎಂದು ಬರೆಸಿರುವ ವರದಿಗಳು ನಿಜವೇ ಆಗಿದ್ದರೆ, ಅದು ವ್ಯಕ್ತಿಯ ಘನತೆಗೆ ಕುಂದುಂಟು ಮಾಡಿದಂತಾಗತ್ತದೆ. ಯಾವುದೇ ನಾಗರಿಕ ಸಮಾಜ ಇಂತಹ ನಿರ್ಲಜ್ಜ ಕ್ರಮಗಳನ್ನು ಒಪ್ಪುವುದಿಲ್ಲ ಎಂದು ನೋಟೀಸಿನಲ್ಲಿ ಹೇಳಲಾಗಿದೆ.

50 ಸಾವಿರ ಕುಟುಂಬಗಳ ಮನೆಗಳ ಗೋಡೆ ಮೇಲೆ ‘ನಾನು ಬಡವ’ ಎಂದು ಬರೆದಿದ್ದು, ಅದರಲ್ಲಿ ಸರ್ಕಾರದಿಂದ ರಿಯಾಯಿತಿ ದರದಲ್ಲಿ ಪಡಿತರ ಸ್ವೀಕರಿಸಿರುವುದಾಗಿ ಬರೆದಿದ್ದುದು ಜೂನ್ 22 ರಂದು ಬೆಳಕಿಗೆ ಬಂದಿತ್ತು.

ಹಿಂದುಳಿದ ವರ್ಗದ ಕುಟುಂಬಗಳಿಗೆ ಪಡಿತರ ನೀಡುವಾಗ ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಲು ಈ ಕ್ರಮ ಸರಿಯಾಗಿದೆ ಎಂದು ಸರ್ಕಾರಿ ಅಧಿಕಾರಿಗಳು ಸಮರ್ಥಿಸಿಕೊಂಡಿದ್ದರು.

Loading...
loading...
error: Content is protected !!