ಗಿಲಾನಿ ವಕೀಲನ ಮನೆಯಲ್ಲಿ ಎನ್.ಐ.ಎ ಶೋಧ

View Later

ಉಗ್ರರಿಗೆ ಹಣಕಾಸಿನ ನೆರವು ನೀಡುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ತಂಡ(ಎನ್.ಐ.ಎ) ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದೆ. ಭಾನುವಾರ ಪ್ರತ್ಯೇಕತಾವಾದಿ ನಾಯಕ ಸೈಯದ್ ಅಲೀ ಶಾ ಗಿಲಾನಿಯ ವಕೀಲ ದೇವಿಂದರ್ ಸಿಂಗ್ ಬಿಹಾಲ್ ಮನೆ ಮತ್ತು ಕಛೇರಿಯಲ್ಲೂ ಎನ್.ಐ.ಎ ಅಧಿಕಾರಿಗಳು ತನಿಖೆ ನಡೆಸಿದರು. ಈತನೂ ಸಹಾ ಉಗ್ರರಿಗೆ ನೆರವು ನೀಡುತ್ರಿವು ಆರೋಪವನ್ನು ಎದುರಿಸುತ್ತಿದ್ದಾನೆ ಎಂದು ಎನ್.ಐ.ಎ ವಕ್ತಾರರು ಹೇಳಿದ್ದಾರೆ. ತೆಹರಿಕ್ ಇ ಹುರಿಯತ್ ನ ಜಮ್ಮೂ ಕಾಶ್ಮೀರ್ ಸೋಷಿಯಲ್ ಪೀಸ್ ಫೋರಮ್ ಗೆ ಅಧ್ಯಕ್ಷನಾಗಿದ್ದಾನೆ ಈತ.

ಅರುಣ್ ಜೇಟ್ಲಿಯವರನ್ನು ನಿಂದಿಸುವಂತೆ ಸೂಚಿಸಿದ್ದೇ ಕೇಜ್ರಿವಾಲ್: ಜೇಠ್ಮಲಾನಿ

ಪ್ರತ್ಯೇಕತಾವಾದಿಗಳು ಲೀಗಲ್ ಸೆಲ್ ನಲ್ಲಿ ಸದಸ್ಯನಾಗಿರುವ ಬಿಹಾಲ್, ಉಗ್ರರ ಅಂತ್ಯಕ್ರಿಯೆಗಳಲ್ಲಿ, ಮೆರವಣಿಗೆಗಳಲ್ಲಿ ಪಾಲ್ಗೊಂಡಿದ್ದಾಗಿ ತಿಳಿದು ಬಮದಿದೆ. ತನಿಖೆಗಳಲ್ಲಿ ಹಲವು ದಾಖಲೆಗಳನ್ನು, ನಾಲ್ಕು ಮೊಬೈಲ್, ಒಂದು ಟ್ಯಾಬ್ ಹಾಗೂ ಇತರೆ ವಸ್ತುಗಳನ್ನು ಎನ್.ಐ.ಎ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಇಂದು ಎನ್.ಐ.ಎ ಎದುರು ಹಾಜರಾಗಬೇಕಿದ್ದ ಗಿಲಾನಿ ಹಿರಿಯ ಪುತ್ರ ನಯೀಮ್ ಎದೆನೋವು ಕಾರಣವೊಡ್ಡಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾನೆ. ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗಿಲಾನಿ ಅಳಿಯ ಸೇರಿದಂತೆ ಹಲವರನ್ನು ಎನ್.ಐ.ಎ ಬಂಧಿಸಿದೆ.