ಉಗ್ರರಿಗೆ ಆರ್ಥಿಕ ನೆರವು ಪ್ರಕರಣ: ಶಾಸಕ ರಷೀದ್ ಗೆ ಎನ್.ಐ.ಎ ಯಿಂದ ಸಮನ್ಸ್ – News Mirchi

ಉಗ್ರರಿಗೆ ಆರ್ಥಿಕ ನೆರವು ಪ್ರಕರಣ: ಶಾಸಕ ರಷೀದ್ ಗೆ ಎನ್.ಐ.ಎ ಯಿಂದ ಸಮನ್ಸ್

ಕಾಶ್ಮೀರ ಕಣಿವೆಯಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸುತ್ತಿರುವ ಭಯೋತ್ಪಾದಕ ಸಂಘಟನೆಗಳಿಗೆ ಆರ್ಥಿಕ ನೆರವು ನೀಡುತ್ತಿರುವ ಆರೋಪದ ಮೇಲೆ ವಿಚಾರಣೆಗೆ ಹಾಜರಾಗುವಂತೆ ಪಕ್ಷೇತರ ಶಾಸಕ ಹಾಗೂ ಇತ್ತೆಹಾದ್ ಪಕ್ಷದ ಅಧ್ಯಕ್ಷ ಇಂಜಿನೀರ್ ರಷೀದ್ ಗೆ ರಾಷ್ಟ್ರೀಯ ತನಿಖಾ ಸಂಸ್ಥೆ ಸಮ್ಮನ್ಸ್ ಜಾರಿ ಮಾಡಿದೆ.

ವಿಚಾರಣೆ ವೇಳೆ ರಷೀದ್ ಕೈವಾಡ ಬಯಲು

ಮೇ 30 ರಂದು ಈ ಸಂಬಂಧ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್.ಐ.ಎ) ದೂರು ದಾಖಲಿಸಿಕೊಂಡಿತ್ತು. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಪ್ರತ್ಯೇಕವಾದಿ ನಾಯಕ ಸೈಯದ್ ಅಲಿ ಗಿಲಾನಿ ಅಳಿಯ ಜಹೂರ್ ವಟಾಲಿ ಮತ್ತು ಆಪ್ತರು ಸೇರಿದಂತೆ ಎನ್.ಐ.ಎ 10 ಜನರನ್ನು ಬಂಧಿಸಿತ್ತು. ಇವರ ವಿಚಾರಣೆ ಸಂದರ್ಭದಲ್ಲಿ ಕಾಶ್ಮೀರ ಪ್ರತ್ಯೇಕತಾವಾದಿಗಳಿಗೆ ಮತ್ತು ಪಾಕ್ ಪ್ರಾಯೋಜಿತ ಉಗ್ರರಿಗೆ ಕಾಶ್ಮೀರ ಕಣಿವೆಯಲ್ಲಿ ರಷೀದ್ ಆರ್ಥಿಕ ನೆರವು ನೀಡುತ್ತಿರುವುದು ಬೆಳಕಿಗೆ ಬಂದಿದೆ.

Get Latest updates on WhatsApp. Send ‘Add Me’ to 8550851559

Contact for any Electrical Works across Bengaluru

Loading...
error: Content is protected !!