ಆರು ವರ್ಷದ ಪೋರ ದಿನಕ್ಕೆ ಎಷ್ಟು ಹಣ ಗಳಿಸುತ್ತಾನೆ ಗೊತ್ತಾ..? ಸಾಮಾಜಿಕ ಜಾಲತಾಣದಲ್ಲಿ ಈ ಪೋರನದ್ದೇ ಹವಾ – News Mirchi

ಆರು ವರ್ಷದ ಪೋರ ದಿನಕ್ಕೆ ಎಷ್ಟು ಹಣ ಗಳಿಸುತ್ತಾನೆ ಗೊತ್ತಾ..? ಸಾಮಾಜಿಕ ಜಾಲತಾಣದಲ್ಲಿ ಈ ಪೋರನದ್ದೇ ಹವಾ

ಕೇರಳ: ಪುಟ್ಟ ಮಕ್ಕಳು ತಮ್ಮ ಪುಟ್ಟ ಬಾಯಗಲಿಸಿ ಮಾತುಗಳನ್ನಾಡುವುದೇ ಚೆಂದ. ಪುಟ್ಟ ಪುಟ್ಟ ಹೆಜ್ಜೆಗಳನ್ನು ಹಾಕುತ್ತಾ ಮನೆಯೆಲ್ಲ ಓಡಾಡುವ ಮಗುವಿದ್ದರೆ ಆ ಖುಷಿಯೇ ಬೇರೆ. ಮಗು ವಿಷಯ ಈಗ ಯಾಕೆ ಅಂತ ಇದ್ದೀರಾ ಅಲ್ಲೇ ಇರೋದು ವಿಷ್ಯ.

ನೀವೆಲ್ಲಾದರೂ ಕೇವಲ ಆರು ವರ್ಷದ ಮಗು ಅಡುಗೆ ಮಾಡೋದನ್ನು ಕೇಳಿದ್ದೀರಾ, ಇಲ್ಲಿದ್ದಾನೆ ಒಬ್ಬ ಪೋರ. ಈತ ದಿನಕ್ಕೆ ಕನಿಷ್ಠವೆಂದರೂ ಲಕ್ಷಗಟ್ಟಲೆ ರೂ. ಗಳಿಕೆ ಮಾಡುತ್ತಾನಂತೆ. ಆಟವಾಡುವ ವಯಸ್ಸಿನಲ್ಲಿ ಇದೇನು ಹುಚ್ಚು ಅಂತೀರಾ, ಅಥವಾ ನೀವಿದನ್ನು ನಂಬಲು ಸಿದ್ಧರಿಲ್ಲವಾ..? ಆದರೆ ಈ ಪೋರನ ವಿಡಿಯೋವೊಂದು ವೈರಲ್ ಆಗಿದ್ದು ಸಖತ್ ಸುದ್ದಿ ಮಾಡುತ್ತಿದೆ.

ಕೇರಳದ ಕೊಚ್ಚಿಯ ನಿವಾಸಿ ನಿಹಾಲ್ ರಾಜ್ ನಳ ಪಾಕ ಪ್ರವೀಣನಂತೆ. ಅವನು ಯಾವುದೇ ಕುಕರಿ ಶೋ ನಡೆಸುತ್ತಿಲ್ಲ. ಆದರೆ ಆತನಿಗೆ ಅಡುಗೆ ತಯಾರಿಸುವುದು ಬಲು ಇಷ್ಟವಂತೆ. ಪ್ರತಿದಿನ ಕಡಿಮೆ ಎಂದರೂ ಒಂದು ಲಕ್ಷ ಸಂಪಾದಿಸುತ್ತಾನಂತೆ. ಇದೀಗ ಆತನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹವಾ ಎಬ್ಬಿಸಿದೆ.

ನಿಹಾಲ್ ಅಮ್ಮ ಅಡುಗೆ ಮನೆಯಲ್ಲಿ ಅಡುಗೆ ಮಾಡುತ್ತಿರುವಾಗ ಅವರ ಜೊತೆ ನಿಂತು ನೋಡುತ್ತಿದ್ದನಂತೆ. ಹಾಗೇ ಅಮ್ಮನಿಗೆ ಅಡುಗೆ ಮಾಡಲು ಸಹಾಯ ಮಾಡುತ್ತಿದ್ದನಂತೆ. ಆ ಸಮಯದಲ್ಲಿ ಅವನ ತಂದೆ ವಿಡಿಯೋ ಮಾಡುತ್ತಿದ್ದರಂತೆ. ಅದನ್ನು ತನ್ನ ಫೇಸ್ ಬುಕ್ ಅಕೌಂಟ್ ನಲ್ಲಿ ಶೇರ್ ಮಾಡುತ್ತಿದ್ದರಂತೆ. ಜನರು ಇಷ್ಟಪಡುತ್ತಿದ್ದಂತೆ ನಿಹಾಲ್ ತಂದೆ ಯೂಟ್ಯೂಬ್ ಚಾನಲ್ ಮೂಲಕ ಕಿಚಟ್ಯೂಬ್ ಮಾಡುವ ನಿರ್ಧಾರ ಕೈಗೊಂಡರು. ಅದರಲ್ಲಿ ಪ್ರತಿದಿನ ನಿಹಾಲ್ ವಿಡಿಯೋ ಅಪ್ ಲೋಡ್ ಮಾಡತೊಡಗಿದರು. ರೆಸಿಪಿಗಳನ್ನು ವಿಡಿಯೋ ಮಾಡಿ ಅದರಲ್ಲಿ ಹರಿಬಿಡಲಾಗುತ್ತಿದೆಯಂತೆ.

ಅಮೆರಿಕಾದಲ್ಲಿ ನಡೆದ ಪಾಪ್ಯುಲರ್ ಶೋ ಒಂದರಲ್ಲಿ ಪಾಲ್ಗೊಂಡು ಪುಟ್ಟು ಹೆಸರಿನ ರೆಸಿಪಿ ತಯಾರಿಸಿ ಪ್ರಶಸ್ತಿ ಗಳಿಸಿದ್ದಾನೆ. ಈ ಪೋರನಿಗೆ ಸಿಹಿತಿನಿಸುಗಳನ್ನು ತಯಾರಿಸುವುದೇ ಇಷ್ಟವಂತೆ.

Get Latest updates on WhatsApp. Send ‘Add Me’ to 8550851559

Click for More Interesting News

Loading...
error: Content is protected !!