ಹೋಟೆಲುಗಳಲ್ಲಿನ ಆಹಾರ ಪದಾರ್ಥಗಳಿಗೆ ಹೆಚ್ಚುವರಿ ತೆರಿಗೆ ವಿಧಿಸಿಲ್ಲ

ಚೆನ್ನೈ: ಹೋಟೆಲುಗಳಲ್ಲಿನ ಆಹಾರ ಪದಾರ್ಥಗಳಿಗೆ ಜಿ.ಎಸ್.ಟಿ ಮೂಲಕ ಯಾವುದೇ ಹೆಚ್ಚುವರಿ ತೆರಿಗೆ ವಿಧಿಸಿಲ್ಲ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟಪಡಿಸಿದ್ದಾರೆ. ಭಾನುವಾರ ಚೆನ್ನೈನಲ್ಲಿ ಪತ್ರಕರ್ತರೊಂದಿಗೆ ಆಕೆ ಮಾತನಾಡುತ್ತಿದ್ದರು. ಹಳೆಯ ತೆರಿಗೆಗೆ ಸಮಾನವಾಗಿ ಹೊಸ ತೆರಿಗೆಯನ್ನು ವಿಧಿಸಲಾಗಿದೆ ಅಷ್ಟೆ. ಅದಕ್ಕಿಂತ ಹೆಚ್ಚು ತೆರಿಗೆ ವಿಧಿಸಿಲ್ಲ, ಅದರಿಂದ ಗ್ರಾಹಕರು ಆತಂಕ ಪಡಬೇಕಾಗಿಲ್ಲ ಎಂದರು.

ಒಂದೊಂದು ವಸ್ತು, ಸೇವೆಗಳಿಗೆ ಎಷ್ಟು ತೆರಿಗೆ ವಿಧಿಸಬೇಕು ಎಂದು ಜಿ.ಎಸ್.ಟಿ ಕೌನ್ಸಿಲ್ ಸ್ಪಷ್ಟವಾದ ಮಾರ್ಗಸೂಚಿಗಳನ್ನು ರಚಿಸಿದೆ ಎಂದು ನಿರ್ಮಲಾ ಸೀತಾರಾಮನ್ ನೆನಪಿಸಿದರು. ಪ್ರಸ್ತುತ ಇರುವ ತೆರಿಗೆಗಿಂತ ಕಡಿಮೆ ತೆರಿಗೆ ವಿಧಿಸುವುದಕ್ಕೆ ನಾವು ಹೆಚ್ಚು ಪ್ರಾಮುಖ್ಯತೆ ನೀಡಿದ್ದೇವೆ ಎಂದು ಹೇಳಿದರು.