ಇಂದು ನನಗೆ ವಿಶೇಷ ದಿನ |News Mirchi

ಇಂದು ನನಗೆ ವಿಶೇಷ ದಿನ

ತಮಗೆ ವಹಿಸಿರುವ ರಕ್ಷಣಾ ಖಾತೆ ಬಹಳ ಜವಾಬ್ದಾರಿಯುತವಾಗಿದೆ ಎಂದು ನೂತನ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ದೇಶದ ರಕ್ಷಣೆಗೆ ಶ್ರಮಿಸುವುದಾಗಿ ಅವರು ಹೇಳಿದರು. ಭಾನುವಾರ ರಕ್ಷಣಾ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಅವರು ದೆಹಲಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದರು. ಈ ದಿನ ನನಗೆ ತುಂಬಾ ವಿಶಿಷ್ಟವಾಗಿದ್ದು, ಈ ಕುರಿತು ಪ್ರತಿಕ್ರಿಯಿಸಲು ನನ್ನಲ್ಲಿ ಪದಗಳೇ ಇಲ್ಲ ಎಂದು ಹರ್ಷ ವ್ಯಕ್ತಪಡಿಸಿದರು.

ತನ್ನಿಂದ ನಿರೀಕ್ಷಿಸಿದ ಗುರಿಗಳನ್ನು ತಲುಪಲು ನಾನು ಶಕ್ತಿ ಮೀರಿ ಪ್ರಯತ್ನಿಸುತ್ತೇನೆ ಎಂದ ನಿರ್ಮಲಾ ಸೀತಾರಾಮನ್, ಇದುವರೆಗೂ ರಕ್ಷಣಾ ಸಚಿವರಾಗಿ ಕೆಲಸ ಮಾಡಿದವರೆಲ್ಲಾ ಉತ್ತಮ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ ಎಂದು ಅಭಿಪ್ರಾಯಪಟ್ಟರು. ಈ ತಿಂಗಳ 6 ರಂದು ಅಧಿಕಾರ ಸ್ವೀಕರಿಸುತ್ತೇನೆ ಎಂದು ಪ್ರಕಟಿಸಿದರು.

  • No items.

Loading...
loading...
error: Content is protected !!