nirmala-sitharaman

ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ರಾಜೀನಾಮೆ ಕೇಳಿದ ಸುಬ್ರಮಣ್ಯ ಸ್ವಾಮಿ

ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಹಿರಿಯ ಬಿಜೆಪಿ ಮುಖಂಡ, ರಾಜ್ಯಸಭೆ ಸಂಸದ ಸುಬ್ರಮಣ್ಯ ಸ್ವಾಮಿ ಸಂಚಲನ ಹೇಳಿಕೆ ನೀಡಿದ್ದಾರೆ. ಜಮ್ಮೂ ಕಾಶ್ಮೀರದ ಶೋಪಿಯಾನ್ ನಲ್ಲಿ ಸೇನೆಯ ಗುಂಡಿಗೆ ಜನಸಾಮಾನ್ಯರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇಜರ್ ಆದಿತ್ಯ ಕುಮಾರ್ ವಿರುದ್ಧ ಕಾನೂನು ಕ್ರಮಕ್ಕೆ ಸುಪ್ರೀಂ ಕೋರ್ಟ್ ಮಧ್ಯಂತರ ತಡೆ ವಿಧಿಸಿದ ಹಿನ್ನೆಲೆಯಲ್ಲಿ ಸುಬ್ರಮಣ್ಯ ಸ್ವಾಮಿ ಈ ಹೇಳಿಕೆ ನೀಡಿದ್ದಾರೆ.

ಗುಂಡಿನ ದಾಳಿ ಸಂದರ್ಭದಲ್ಲಿ ತಮ್ಮ ಪುತ್ರ ಘಟನೆ ನಡೆದ ಸ್ಥಳದಲ್ಲಿರಲಿಲ್ಲ, ಆತನ ವಿರುದ್ಧ ದಾಖಲಾಗಿರುವ ಕೇಸನ್ನು ರದ್ದುಗೊಳಿಸಬೇಕು ಎಂದು ಮೇಜರ್ ಆದಿತ್ಯ ಅವರ ತಂದೆ ಲೆಫ್ಟಿನೆಂಟ್ ಕರ್ನಲ್ ಕರಮ್ ವೀರ್ ಸಿಂಗ್ ಪಿಟೀಷನ್ ದಾಖಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಸೋಮವಾರ ಮೇಜರ್ ವಿರುದ್ಧ ಕಾನೂನು ಕ್ರಮಕ್ಕೆ ತಡೆ ನೀಡಿದರು. ಸೇನೆ ವಿರುದ್ಧ ರಾಜ್ಯ ಸರ್ಕಾರ ಅದು ಹೇಗೆ ಎಫ್ಐಆರ್ ದಾಖಲಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿತು. ಈ ಕುರಿತು ಎರಡು ವಾರಗಳಲ್ಲಿ ತಮ್ಮ ಪ್ರತಿಕ್ರಿಯೆ ತಿಳಿಸಲು ಜಮ್ಮೂ ಕಾಶ್ಮೀರ ಮತ್ತು ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

ಸುಪ್ರೀಂ ತೀರ್ಪಿನ ಹಿನ್ನೆಲೆಯಲ್ಲಿ ಮಾತನಾಡಿದ ಹಿರಿಯ ವಕೀಲ ಮುಕಲ್ ರೋಹಟಗಿ, ಈ ಪ್ರಕರಣವನ್ನು ಹೈಕೋರ್ಟಿನಲ್ಲಿ ವಿಚಾರಣೆ ನಡೆಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ ಎಂದು ತಿಳಿಸಿದರು. ಎಫ್ಐಆರ್ ಗೆ ತಡೆ ನೀಡಿರುವ ಸುಪ್ರೀಂ, ಕರ್ತವ್ಯ ನಿರ್ವಹಣೆಯ ಭಾಗವಾಗಿ ಮೇಜರ್ ಆದಿತ್ಯ ಅವರು ತೆಗೆದುಕೊಂಡ ಕ್ರಮದ ವಿರುದ್ಧ ಕೇಂದ್ರ ಸರ್ಕಾರ ಅಥವಾ ರಾಜ್ಯ ಪೊಲೀಸರು ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದ್ದಾಗಿ ತಿಳಿಸಿದರು. ಮತ್ತೊಂದು ನ್ಯಾಯಾಲಯದ ಆದೇಶ ಸೇನೆಗೆ ಪ್ರೋತ್ಸಾಹದಾಯಕ ದಿನವೆಂದು ವಕೀಲ ಐಶ್ವರ್ಯ ಭಾಟಿ ಹರ್ಷ ವ್ಯಕ್ತಪಡಿಸಿದರು.

ಕರ್ನಾಟಕಕ್ಕೆ ಒಂದು ಹನಿ ನೀರೂ ಬಿಡೋಲ್ಲ ಅಂದಿದ್ರು ಸೋನಿಯಾ, ನಿಮ್ಮನ್ನು ಯಾರು ನಂಬುತ್ತಾರೆ: ಯಡಿಯೂರಪ್ಪ

ಜನವರಿಯಲ್ಲಿ ಶೋಪಿಯಾನ್ ಜಿಲ್ಲೆಯಲ್ಲಿ ಪ್ರತಿಭಟನಾಕಾರರ ವಿರುದ್ಧ ಸೇನೆ ಹಾರಿಸಿದ ಗುಂಡಿಗೆ ಮೂವರು ನಾಗರಿಕರು ಸಾವನ್ನಪ್ಪಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಮೇಜರ್ ಆದಿತ್ಯ ಕುಮಾರ್ ವಿರುದ್ಧ ಜಮ್ಮೂ ಕಾಶ್ಮೀರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

Get Latest updates on WhatsApp. Send ‘Subscribe’ to 8550851559