ನಾಳೆ ರಕ್ಷಣಾ ಸಚಿವರು ಫಿಲಿಫೈನ್ಸ್ ಗೆ

ನವದೆಹಲಿ,ಅ.22: ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಇದೇ ಮೊದಲ ಬಾರಿಗೆ ವಿದೇಶ ಪ್ರವಾಸ ಕೈಗೊಂಡಿದ್ದು, ಸೋಮವಾರ ಫಿಲಿಫೈನ್ಸ್ ಗೆ ತೆರಳಲಿದ್ದಾರೆ. ಆಗ್ನೇಯ ಏಷ್ಯಾ ರಾಷ್ಟ್ರಗಳ ರಕ್ಷಣಾ ಸಚಿವರ ಸಭೆಯಲ್ಲಿ ಪಾಲ್ಗೊಳ್ಳಲು ಅವರು ತೆರಳಲಿದ್ದು, ಸಭೆಯಲ್ಲಿ ದಕ್ಷಿಣಾ ಚೀನಾ ಸಮುದ್ರದಲ್ಲಿ ಹೆಚ್ಚುತ್ತಿರುವ ಚೀನಾ ಪ್ರಾಭಲ್ಯ ಸೇರಿದಂತೆ ಪ್ರಾದೇಶಿಕ ಭದ್ರತೆ ಕುರಿತು ಚರ್ಚೆ ನಡೆಯಲಿದೆ.

[ಇದನ್ನೂ ಓದಿ: ತಮಿಳರ ಆತ್ಮಾಭಿಮಾನ ಕೆಣಕದಿರಿ ಎಂದ ರಾಹುಲ್]

ಸದಸ್ಯರಾಷ್ಟ್ರಗಳ ನಡುವೆ ರಕ್ಷಣೆ ಹಾಗೂ ಭದ್ರತಾ ಸಹಕಾರ ಹೆಚ್ಚಿಸಲು ಹಾಗೂ ಅಂತಾರಾಷ್ಟ್ರೀಯ ಭದ್ರತಾ ಸವಾಲುಗಳನ್ನು ಎದುರಿಸಲು ಇರುವ ದಾರಿಗಳ ಕುರಿತು ಚರ್ಚೆಯಾಗಲಿದೆ. ಸಭೆಯಲ್ಲಿ ನಿರ್ಮಲಾ ಸೀತಾರಾಮನ್ ಭಾರತದ ನಿಲುವನ್ನು ಮಂಡಿಸಲಿದ್ದಾರೆ. ವಿವಿಧ ದೇಶಗಳ ರಕ್ಷಣಾ ಸಚಿವರ ಜೊತೆ ಸಚಿವೆ ನಿರ್ಮಲಾ ಸೀತಾರಾಮನ್ ಮಾತುಕತೆ ನಡೆಸಲಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.

Get Latest updates on WhatsApp. Send ‘Add Me’ to 8550851559