ನಿತೀಶ್ ಪ್ಲಾನ್ ಮೊದಲೇ ಗೊತ್ತಿತ್ತು, ನಮಗೆ ಮೋಸ ಮಾಡಿದರು |News Mirchi

ನಿತೀಶ್ ಪ್ಲಾನ್ ಮೊದಲೇ ಗೊತ್ತಿತ್ತು, ನಮಗೆ ಮೋಸ ಮಾಡಿದರು

ನವದೆಹಲಿ: ಮಹಾ ಮೈತ್ರಿಕೂಟದಿಂದ ಹೊರಬಂದು ಬಿಜೆಪಿಯೊಂದಿಗೆ ಸೇರಿ ಸರ್ಕಾರ ರಚಿಸುತ್ತಿರುವ ಜೆಡಿಯು ಅಧ್ಯಕ್ಷ ನಿತೀಶ್ ಕುಮಾರ್ ವಿರುದ್ಧ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿತೀಶ್ ಕುಮಾರ್ ನಮಗೆ ಮೋಸ ಮಾಡಿದ್ದಾರೆ ಎಂದು ದೂರಿದ್ದಾರೆ. ನಿತೀಶ್ ಮತ್ತೆ ಎನ್.ಡಿ.ಎ ಯಲ್ಲಿ ಸೇರಲು ಯತ್ನಿಸುತ್ತಿದ್ದ ವಿಷಯ ನನಗೆ ಮೂರು ನಾಲ್ಕು ತಿಂಗಳ ಹಿಂದೆಯೇ ತಿಳಿದಿತ್ತು. ಅಂದಿನಿಂದಲೂ ನಿತೀಶ್ ಎನ್.ಡಿ.ಎ ಜೊತೆ ಸಂಪರ್ಕದಲ್ಲಿದ್ದರು. ತಮ್ಮ ಸ್ವಾರ್ಥಕ್ಕಾಗಿ ಕೆಲವರು ಏನು ಬೇಕಾದರೂ ಮಾಡುತ್ತಾರೆ. ನಿತೀಶ್ ಕುಮಾರ್ ನಮ್ಮನ್ನು ವಂಚಿಸಿದ್ದಾರೆ ಎಂದು ರಾಹುಲ್ ಕಿಡಿ ಕಾರಿದ್ದಾರೆ.

ಬಿಹಾರದಲ್ಲಿನ್ನು ಜೆಡಿಯು ಬಿಜೆಪಿ ಮೈತ್ರಿ ಸರ್ಕಾರ

ಕೋಮುವಾದಕ್ಕೆ ವಿರುದ್ಧವಾಗಿ ಹೋರಾಟ ನಡೆಸಿ ಎಂದು ಜನ ನಿತೀಶ್ ಕುಮಾರ್ ಗೆ ತೀರ್ಪು ನೀಡಿದ್ದರು. ಆದರೆ ಅವರು ತಮ್ಮ ವೈಯುಕ್ತಿಕ ರಾಜಕಾರಣಕ್ಕಾಗಿ ಬಿಜೆಪಿಯೊಂದಿಗೆ ಕೈಜೋಡಿಸಿದ್ದಾರೆ ಎಂದು ರಾಹುಲ್ ಆರೋಪಿಸಿದ್ದಾರೆ. ಕಾಂಗ್ರೆಸ್ ನಿನ್ನೆಯವರೆಗೂ ಬಿಹಾರದಲ್ಲಿ ಆಡಳಿತದಲ್ಲಿದ್ದ ಮಹಾಮೈತ್ರಿಕೂಟ ಸರ್ಕಾರದ ಪಾಲುದಾರನಾಗಿತ್ತು. ದಿಢೀರನೆ ಮಹಾಮೈತ್ರಿಕೂಟ ತೊರೆದು ಸಿಎಂ ಹುದ್ದೆಗೆ ರಾಜೀನಾಮೆ ನೀಡಿದ ನಿತೀಶ್ ಕುಮಾರ್, ಕೂಡಲೇ ಬಿಜೆಪಿಯೊಂದಿಗೆ ಸೇರಿ ಸರ್ಕಾರ ರಚಿಸಿದ್ದು ಆರ್.ಜೆ.ಡಿ ಮತ್ತು ಕಾಂಗ್ರೆಸ್ ಗೆ ನುಂಗಲಾರದ ತುತ್ತಾಗಿದೆ.

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜೀನಾಮೆ

Loading...
loading...
error: Content is protected !!